ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕಾರ ಮಾಡಿದ ಮರುದಿನವೇ ಕ್ಯಾಬೀನೆಟ್ ಸಭೆ ನಡೆಸಿ ದೇಶವನ್ನು ರಕ್ಷಣೆ ಮಾಡುವ ಯೋಧರಿಗೆ ಮೊದಲ ಆಧ್ಯತೆಯನ್ನು ನೀಡಿದ್ದು, ರಾಷ್ಟ್ರೀಯ ರಕ್ಷಣಾ ನಿಧಿಯಿಂದ ನೀಡಲಾಗುತ್ತಿದ್ದ ಪ್ರಧಾನ ಮಂತ್ರಿ ವಿದ್ಯಾರ್ಥಿ ವೇತನ ಯೋಜನೆ ಮೊತ್ತವನ್ನು ಏರಿಕೆ ಮಾಡಿರುವುದಾಗಿ ಸರ್ಕಾರ ತಿಳಿಸಿದ್ದು, ನಮ್ಮ ದೇಶವನ್ನು ರಕ್ಷಣೆ ಮಾಡುವ ಯೋಧರಿಗೆ ಗೌರವ ಸಲ್ಲಿಸಲು ಮೊದಲ ಸಭೆಯನ್ನು ನಡೆಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಹುತಾತ್ಮ ಯೋಧರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನದಲ್ಲಿ ಹುಡುಗರಿಗೆ ಶೇ 25ರಷ್ಟು ಏರಿಕೆ ಆಗಿದ್ದು, ಹುಡುಗಿಯರಿಗೆ ಶೇ 33ರಷ್ಟು ಏರಿಕೆ ಮಾಡಲಾಗಿದೆ. ಈ ಹಿಂದೆ ಹುಡುಗರಿಗೆ 2ಸಾವಿರ ರೂ ನೀಡುತ್ತಿದ್ದು, 2500 ಕ್ಕೆ ಏರಿಕೆಯಾಗಿದೆ. ಹುಡಿಗಿಯರಿಗೆ 2250 ರೂ ನೀಡುತ್ತಿದ್ದು, 3000 ರೂ ಗೆ ಏರಿಕೆಯಾಗಿದೆ. ಹಾಗೂ ನಕ್ಸಲರು ಅಥವಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪೊಲೀಸರ ಮಕ್ಕಳಿಗೂ ಈ ಯೋಜನೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.










