ನಮ್ಮೂರು ಕಳಸ ವ್ಯಾಟ್ಸ್ ಆಪ್ ಗ್ರೂಪ್ ಸದಸ್ಯರು ತೋಟಗಾರಿಕಾ ಇಲಾಖಾ ಕ್ಷೇತ್ರದಲ್ಲಿ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚಣೆ ಆಚರಣೆ…

503

ಕಳಸ: ನಮ್ಮೂರು ಕಳಸ ವ್ಯಾಟ್ಸ್ ಆಪ್ ಗ್ರೂಪ್ ಮತ್ತು ಹಿರೇಬೈಲು ಬಿಳಗಲಿ ಸರ್ಕಾರಿ ಪ್ರೌಢ ಶಾಲೆ ಇಂಚರ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ನಮ್ಮೂರು ಕಳಸ ಗ್ರೂಪ್ ಸದಸ್ಯರು ತೋಟಗಾರಿಕಾ ಇಲಾಖಾ ಕ್ಷೇತ್ರದಲ್ಲಿ ವಿವಿಧ ತಳಿಯ ಗಿಡಗಳನ್ನು ನೆಟ್ಟು ಆಚರಿಸಿದರು. ಹಿರೇಬೈಲು ಬಿಳಗಲಿ ಸರ್ಕಾರಿ ಪ್ರೌಢ ಶಾಲೆ ಇಂಚರ ಇಕೋ ಕ್ಲಬ್ ವತಿಯಿಂದ ಶಾಲಾ ಅವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವ್ಯಾಟ್ಸ್ ಆಪ್ ಗ್ರೂಪ್ ಸದಸ್ಯರಾದ ಚಂದ್ರಪ್ಪ, ಅಶೋಕ್,ಮಧು,ಶ್ರೀಕಾಂತ್,ಗಣೇಶ್,ಇಡಕಿಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಚಿತ್ರಾ ಶ್ರೀಕಾಂತ್,ಸುಧಾಕರ್ ಇತರರು ಇದ್ದರು.