ಪ್ಲಾಸ್ಟೀಕ್ ರಹಿತ ಕೈಚೀಲ ತನ್ನಿ ಒಂದು ಮೊಟ್ಟೆ ಉಚಿತವಾಗಿ ಪಡೆದುಕೊಳ್ಳಿ,ಇದೇನಿದು ಹೋಸ ಜಾಹಿರಾತು ಎಂದು ಅಂದುಕೊಳ್ಳಬೇಡಿ.

688

ಮೂಡಿಗೆರೆ :  ಕಳಸ ಪಟ್ಟಣದ ಜನತಾ ಸ್ಟೋರ್ ಮೊಟ್ಟೆ ವ್ಯಾಪಾರಿ ಟಿಟ್ಟು ತೋಮಸ್ ಇಂತಹ ವಿನೂತನ ಆಫರ್ ಇಟ್ಟಿದ್ದಾರೆ.ಇವರ ಅಂಗಡಿಯಲ್ಲಿ ಗ್ರಾಹಕರು ಪ್ಲಾಸ್ಟಿಕ್ ರಹಿತ ಕೈಚೀಲವನ್ನು ತಂದು 20 ರೂ ಪೈ ಮೊಟ್ಟೆಯನ್ನು ಖರೀದಿಸಿದರೆ ಒಂದು ಮೊಟ್ಟೆಯನ್ನು ಉಚಿತವಾಗಿ ನೀಡುತ್ತಾರಂತೆ.ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಪ್ಲಾಸ್ಟಿಕ್ ರಹಿತ ಪಟ್ಟಣ ಮಾಡುವ ಸಂಕಲ್ಪವನ್ನು ಮಾಡಿ ಇದರ ಮೊದಲ ಹೆಜ್ಜೆಯನ್ನು ವಿಶ್ವ ಪರಿಸರ ದಿನಾಚರಣೆಯಿಂದ ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಇಂತಹ ಹೊಸ ಆಫರ್ ಇಟ್ಟಿದ್ದಾರೆ.ಈ ಬಗ್ಗೆ ಪೋಸ್ಟರ್ ಒಂದನ್ನು ತಯಾರಿಸಿ ಸಾಮಾಜಿಕ ವ್ಯಾಟ್ಸ್ ಆಪ್,ಪೇಸ್ ಬುಕ್‍ಗಳಿಗೆ ಅಪ್ಲೋಡ್ ಮಾಡಿದ್ದಾರೆ.ಸಾಕಷ್ಟು ಜನ ಇದನ್ನು ಬೆಂಬಲಿಸಿದ್ದಾರೆ.
ಈ ಬಗ್ಗೆ ಅವರ ಬಳಿ ಮಾತನಾಡಿಸಿದಾಗ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ಅಸಾಧ್ಯ,ದೊಡ್ಡ ದೊಡ್ಡ ಪ್ಲಾಸ್ಟಿಕ್ ಕಂಪೆನಿಗಳ ಮೇಲೆ ಏನೂ ಮಾಡಲು ಅಸಾಧ್ಯ.ಅದಕ್ಕೆ ಜನರೇ ಎಚ್ಚೆತ್ತು ಪ್ಲಾಸ್ಟಿಕ್ ತೆಗೆದುಕೊಳ್ಳದಿದ್ದರೆ ಒಂದಷ್ಟು ಪ್ಲಾಸ್ಟಿಕ್ ಹಾವಳಿ ಕಡಿಮೆ ಆಗಬಹುದು.ಅದಕ್ಕಾಗಿ ಇಂತಹ ಆಫರ್ ಇಟ್ಟಿದ್ದೇನೆ.ನನ್ನಲ್ಲಿ ಬರುವ ನೂರು ಗ್ರಾಹಕರಲ್ಲಿ 50 ಜನ ಪ್ಲಾಸ್ಟಿಕ್ ರಹಿತ ಬ್ಯಾಗ್ ನೊಂದಿಗೆ ಬಂದರೆ ಸ್ವಲ್ಪನಾದರೂ ಪರಿಣಾಮ ಬೀರಬಹುದಲ್ವೆ ಇದೇ ರೀತಿ ಎಲ್ಲಾ ಅಂಗಡಿಯವರು ಮಾಡಿದ್ದರೆ ಒಂದಷ್ಟು ಬದಲಾವಣೆ ಸಾಧ್ಯ ಅನ್ನುತ್ತಾರೆ.
ಈಗಾಗಲೇ ಹಲವಾರು ಜನ ತಮ್ಮ ತಮ್ಮ ಬೈಕ್‍ನಲ್ಲಿ ಪ್ಲಾಸ್ಟಿಕ್ ರಹಿತ ಕೈಚೀಲದೊಂದಿಗೆ ದಿನಬಳಕೆಯ ಸಾಮಾನು ತೆಗೆದುಕೊಂಡು ಹೋಗುತ್ತಿದ್ದು,ಮುಂದಿನ ದಿನಗಳಲ್ಲಿ ಇಂತಹ ಆಲೋಚನೆಗಳು ಉತ್ತಮ ಪ್ರತಿಕ್ರೀಯೆ ಬರುವುದರಲ್ಲಿ ಸಂದೇಹವಿಲ್ಲ.