ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ವಿಶ್ವಪರಿಸರ ದಿನಾಚರಣೆ ಗಿಡ ನೆಡುವ ಮೂಲಕ ಆಚರಿಸಲಾಯಿತು.

1016

ಮೂಡಿಗೆರೆ – ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಪೊಲೀಸ್ ಠಾಣೆಯಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ವೃತ್ತ ನಿರೀಕ್ಷಕರಾದ ಕ.ಕೆ. ರಘು , “One World, One Environment”- ಇದರ ಅರ್ಥ “ಭೂಮಿ ಒಂದೇ, ಪರಿಸರವು ಒಂದೇ”. ಜೀವಿಗಳು ಜೀವಿಸಲು ಬೇಕಾದ ಪರಿಸರ ಭೂಮಿ ಮೇಲೆ ಮಾತ್ರವಿದೆ, ಇದ್ದ ಒಂದು ಪರಿಸರವನ್ನು ನಾವು ಕಾಪಾಡಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಮಾನವನು ಇದೇ ರೀತಿಯಾಗಿ ಪರಿಸರವನ್ನು ನಾಶ ಮಾಡುತ್ತ ಹೋದರೆ ಒಂದು ದಿನ ನಮ್ಮ ಭೂಮಿಯು ಮಂಗಳ ಗ್ರಹದಂತೆ ಬರಡಾಗಿ ಬಿಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮೂಡಿಗೆರೆ  ಠಾಣಾಧಿಕಾರಿ ರಮೇಶ್  ಸಿಬ್ಬಂದಿಗಳಾದ ವಿಶ್ವನಾಥ್, ಮಂಜುನಾಥ್, ಗಿರೀಶ್,ದಯಾನಂದ್ , ರವಿ ಸೇರಿದಂತೆ ಇತರರು ಇದ್ದರು