ಹಾಸನ : ಸಂಸದ ಪ್ರಜ್ವಲ್ ರೇವಣ್ಣ ಅವರು ಸಂಸದರಾದ ಬಳಿಕ ಕಲಾಭವನ ಆವರಣದಲ್ಲಿ ಆಯೋಜಿಸಿದ್ದ 5ದಿನಗಳ ಮಾವು ಮೇಳ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ್ದು, ಶಾಲಾ ಮಕ್ಕಳು ಹಾಗೂ ಪೋಷಕರಿಗೆ ಮಾವಿನ ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದ್ದು, ರೈತರಿಗೆ ನೆರವಾಗುವಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದರು. ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ, ಸುಭದ್ರವಾಗಿರುತ್ತದೆ. ಸಿಎಂ ಕುಮಾರಸ್ವಾಮಿ ಅವರು ಇನ್ನೂ ಉತ್ತಮ ಯೋಜನೆಯನ್ನು ಕೊಡಲಿದ್ದಾರೆ. ನನ್ನ ರಾಜೀನಾಮೆ ವಿಚಾರವನ್ನು ಈಗಾಗಲೇ ದೊಡ್ಡವರ ಮುಂದೆ ಇಟ್ಟಿದ್ದೇನೆ. ಇದೇ ತಿಂಗಳ 17 ಮತ್ತು 18 ರಂದು ಸಂಸದನಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ. ನನ್ನ ರಾಜೀನಾಮೆ ವಿಷಯಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ. ಬಿಜೆಪಿಯ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ನಾನು ಖಂಡಿಸುತ್ತೇನೆ. ಒಳ್ಳೆ ಕೆಲಸ ಮಾಡಲು ಬೆಂಬಲವನ್ನು ಕೊಡಬೇಕು ಈ ರೀತಿ ಮಾಡುವುದು ಸರಿಯಲ್ಲ. ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪ್ರಜ್ವಲ್ ಅವರು ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಒಳ್ಳೆಯ ನಿರ್ಧಾರ ಎಂದು ಸ್ವಾಗತ ಮಾಡಬೇಕು. ಕುಮಾರಣ್ಣ ಹಿಂದಿನಿಂದಲೂ ಗ್ರಾಮವಾಸ್ತವ್ಯ ಮಾಡಿಕೊಂಡು ಬಂದಿದ್ದಾರೆ. ಗ್ರಾಮವಾಸ್ತವ್ಯ ಮಾಡುವುದರಿಂದ ಜನರ ಹೆಚ್ಚಿನ ಸಮಸ್ಯೆ ತಿಳಿದುಕೊಂಡು ಮತ್ತಷ್ಟು ಒಳ್ಳೆಯ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.










