ಚಾಕಿವಿನಿಂದ ಇರಿದು ಕ್ರಿಕೆಟ್ ಆಟಗಾರನ ಕೊಲೆ…

169
firstsuddi

ಮುಂಬೈ : ಸ್ಥಳೀಯ ಕ್ರಿಕೆಟ್ ಆಟಗಾರನನ್ನು ಮೂವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮುಂಬೈನ ಭಂಡುಪ್ ಪ್ರದೇಶದಲ್ಲಿ ನಡೆದಿದೆ. ರಾಕೇಶ್ ಮೃತ ಕ್ರಿಕೆಟಿಗ ಎನ್ನಲಾಗಿದ್ದು, ರಾಕೇಶ್ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದು, ಇದೇ ಕಾರಣಕ್ಕೆ ಮೂವರು ದುಷ್ಕರ್ಮಿಗಳು ಬೈಕ್‍ನಲ್ಲಿ ಬಂದು ಚಾಕು ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ವಿಷಯ ತಿಳಿದ ಸ್ಥಳೀಯ ಪೊಲೀಸರು ತಕ್ಷಣ ರಾಕೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರೂ ಅಷ್ಟರಲ್ಲಿ ರಾಕೇಶ್ ಮೃತಪಟ್ಟಿದ್ದು, ಪೊಲೀಸರು ದುಷ್ಕರ್ಮಿಗಳಿಗಾಗಿ ತನಿಖೆಯನ್ನು ಮುಂದುವರಿಸಿದ್ದಾರೆ.