ಹೇಮಾವತಿ ಜಲಾಶಯದ ಕೀ ಕೊಟ್ಟರೆ ನಾನು ನೀರುಗಂಟಿ ಕೆಲಸ ಮಾಡಲು ಸಿದ್ದನಿದ್ದೇನೆ : ಜಿ.ಎಸ್. ಬಸವರಾಜು…

190
firstsuddi

ತುಮಕೂರು : ಲೋಕೊಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರ ಬಸವರಾಜು ಒಬ್ಬ ಅನ್‍ಫಿಟ್ ವ್ಯಕ್ತಿ. ಹೇಮಾವತಿ ಜಲಾಶಯದ ಕೀ ಅವರ ಬಳಿ ಕೊಡುತ್ತೇನೆ. ನೀರು ಹರಿಸಿಕೊಳ್ಳಲಿ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು ಅವರು ರೇವಣ್ಣ ಅವರಿಗೆ ತಿರುಗೇಟು ನೀಡಿದ್ದು, ರೇವಣ್ಣ ಅವರಿಗೆ ಅನ್‍ಫಿಟ್ ಪದದ ಅರ್ಥವೇ ಗೊತ್ತಿಲ್ಲ. ನನಗೆ ಹೇಮಾವತಿ ಜಲಾಶಯದ ಕೀ ಕೊಟ್ಟರೆ ನಾನು ನೀರುಗಂಟಿ ಕೆಲಸ ಮಾಡಲು ಸಿದ್ದನಿದ್ದೇನೆ. ನೀರುಗಂಟಿ ಒಂದು ಉತ್ತಮ ಕೆಲಸ. ಪ್ರಧಾನಿ ನರೇಂದ್ರ ಮೋದಿಯವರು ನುಡಿದಂತೆ ನಾನು ನೀರುಗಂಟಿ ಕೆಲಸ ಮಾಡಿ ಕಾವಲುಗಾರನಾಗುತ್ತೇನೆ ಎಂದು ರೇವಣ್ಣ ಅವರ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದ್ದಾರೆ.