ಮೂಡಿಗೆರೆ : 14 ಮೊಟ್ಟೆ ನುಂಗಿದ ನಾಗಪ್ಪ…

638

ಮೂಡಿಗೆರೆ : ತಾಲ್ಲೂಕಿನ ಬಡವನದಿಣ್ಣೆಯ ಮಂಜಯ್ಯ ಎಂಬುವವರ ಮನೆಯಲ್ಲಿ 14 ಮೊಟ್ಟೆಯನ್ನು ನುಂಗಿ ಮುಂದೆ ಚಲಿಸಲಾಗದೆ ನಾಗರಹಾವೊಂದು ಪರದಾಡಿದ ಘಟನೆ ನಡೆದಿದೆ. ಮಂಜಯ್ಯನವರ ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಕೋಳಿಗೂಡಿನ ಬುಟ್ಟಿಯೊಂದರಲ್ಲಿ ಮರಿ ಮಾಡಲು ಇಟ್ಟಿದ 14 ಕೋಳಿಮೊಟ್ಟೆಯನ್ನು ನುಂಗಿ ಮುಂದೆ ತೆವಳಲಾಗದೇ ಪರದಾಡುತ್ತಿದ್ದ ನಾಗರಹಾವನ್ನು ಮನೆಯ ಮಾಲೀಕ ಮಂಜಯ್ಯ ಕಂಡಿದ್ದು ಭಯ ಭಯಬೀತರಾಗಿ ಕೂಡಲೇ ಉರಗಪ್ರೇಮಿ ಆರೀಫ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆರೀಫ್ ನಾಗರಹಾವನ್ನು ನಿಧಾನವಾಗಿ ಮನೆಯೊಳಗಿಂದ ಹೊರ ತಂದಿದ್ದು ಮನೆಯ ಮುಂದೆಯ ಅಂಗಳದಲ್ಲಿ ನುಂಗಿದ ಮೊಟ್ಟೆಗಳನ್ನು ಒಂದೊಂದಾಗಿ ಹೊರ ಹಾಕಿದೆ. ನಂತರ ಸುಮಾರು 8 ಅಡಿ ಉದ್ದವಿದ್ದ ನಾಗರಹಾವನ್ನು ಉರಗ ಪ್ರೇಮಿ ಆರೀಫ್ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟರು.