ಹಾಸನ : ನೀರಿನ ಸಂಪ್‍ನಲ್ಲಿ ಬಿದ್ದು 9ವರ್ಷದ ಬಾಲಕ ಸಾವು…

276

ಹಾಸನ : ನೀರಿನ ಸಂಪ್‍ನಲ್ಲಿ ಬಿದ್ದು 9ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಹೊಳೆನರಸೀಪುರದ ಆದರ್ಶನಗರದಲ್ಲಿ ನಡೆದಿದೆ. ಕಾರ್ತಿಕ್(9) ಪುಟ್ಟಾಚಾರಿ ಎಂಬುವವರ ಮಗ ಎಂದು ತಿಳಿದು ಬಂದಿದ್ದು, ನಿರ್ಮಾಣ ಹಂತದಲ್ಲಿದ್ದ ಮನೆಯನ್ನು ಮಾಲಿಕ ಕೇಶವಮೂರ್ತಿ ಅವರು ನೀರಿನ ತೊಟ್ಟಿಯನ್ನು ಮುಚ್ಚದೇ ಇರುವುದೇ ಈ ಘಟನೆಗೆ ಕಾರಣ ಎನ್ನಲಾಗಿದ್ದು, ನಿನ್ನೆ ರಜೆ ಇದ್ದ ಕಾರಣ ಬಾಲಕ ಆಟ ಆಡುವಾಗ ಸಂಪ್‍ನಲ್ಲಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಗಾರೆ ಕೆಲಸಕ್ಕೆ ಬಂದ ಕಾರ್ಮಿಕರು ಬಾಲಕನ ಮೃತದೇಹ ತೇಲುತ್ತಿರುವುದನ್ನು ಗಮನಿಸಿದ್ದು, ಹೊಳೆನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.