ಮೂಡಿಗೆರೆ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹತ್ತಿಕೊಂಡಿರುವ ಘಟನೆ ಕಳಸ ಪಟ್ಟಣದ ಪೊಲೀಸ್ ಕ್ವಾಟ್ರ್ರಸ್ ಹಿಂಭಾಗದ ಕಲ್ಲುಬಾವಿಯಲ್ಲಿ ನಡೆದಿದೆ. ಪ್ರವೀಣ್ ಎಂಬುವವರಿಗೆ ಸೇರಿದ ಬಾಡಿಗೆ ಮನೆ ಎನ್ನಲಾಗಿದ್ದು, ಬೆಳಿಗ್ಗೆ 8.30ಗೆ ಮನೆಗೆ ಬಾಗಿಲು ಹಾಕಿ ಗ್ಯಾರೇಜ್ ಕೆಲಸಕ್ಕೆ ತೆರಳಿದ್ದಾರೆ.ಸುಮಾರು 9.15ರಹೊತ್ತಿಗೆ ಮನೆಯಿಂದ ಬೆಂಕಿ ಹೊರ ಬರುತ್ತಿರುವುದನ್ನು ಪಕ್ಕದಲ್ಲಿ ಕೆಲಸ ಮಾಡುತ್ತಿದ್ದವರು ಗಮನಿಸಿದ್ದಾರೆ.ಕೂಡಲೆ ಅಕ್ಕ ಪಕ್ಕದ ಮನೆಯವರು ಸೇರಿ ಬಾಗಿಲು ಒಡೆದು ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟೊತ್ತಿಗಾಗಲೇ ಮನೆಯಲ್ಲಿದ್ದ 50 ಸಾವಿರ ನಗದು, ಬೆಳ್ಳಿ ಬಂಗಾರ, ಬಟ್ಟೆ ಬರೆ, ಹಾಸಿಗೆ, ಟೀವಿ, ಗೋದ್ರೇಜ್, ರೇಷನ್ ಕಾರ್ಡ್, ಆದಾರ್ ಕಾರ್ಡ್, ಗಾಡಿ ಲೈಸನ್ಸ್, ಅಂಕಪಟ್ಟಿ ಮುಂತಾದ ದಾಖಲಾತಿಗಳು ಸಂಪೂರ್ಣ ಸುಟ್ಟು ಹೋಗಿದೆ ಸುಮಾರು ಒಂದು ಲಕ್ಷರೂ ವರೆಗೆ ನಷ್ಟವಾಗಿದ್ದು, ರಕ್ಷಣಾ ವೇದಿಕೆ ಸದಸ್ಯ ಕನ್ನಡ ರಾಜು ಹಾಗೂ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









