ಯೋಗ ಕೇವಲ ನಗರ ಪ್ರದೇಶಗಳ ಶ್ರೀಮಂತರ ದಿನಾಚರಣೆಯಾಗದೆ ಹಳ್ಳಿಗಳ ಜನರ ಜೀವನದ ಭಾಗವಾಗಬೇಕಿದೆ : ನರೇಂದ್ರ ಮೋದಿ…

236
firstsuddi

ರಾಂಚಿ : 5ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಂಚಿಯಲ್ಲಿರುವ ಪ್ರಭಾತ್ ತಾರಾ ಮೈದಾನದಲ್ಲಿ ಏರ್ಪಡಿಸಿದ್ದ ಯೋಗಭ್ಯಾಸದಲ್ಲಿ ಪಾಲ್ಗೊಂಡು ಯೋಗ ದಿನಾಚರಣೆಯನ್ನು ಆಚರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಯೋಗಾಭ್ಯಾಸವನ್ನು ಮಾಡಲು 20ಸಾವಿರಕ್ಕೂ ಹೆಚ್ಚು ಮಂದಿ ಹೆಸರನ್ನು ನೊಂದಾಯಿಸಿದ್ದು, ಅವರ ಜೊತೆ ಮೋದಿಯವರು ಯೋಗಾಭ್ಯಾಸವನ್ನು ಮಾಡಿದ್ದಾರೆ.

firstsuddi

ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ಯೋಗ ಕೇವಲ ನಗರ ಪ್ರದೇಶಗಳ ಶ್ರೀಮಂತರ ದಿನಾಚರಣೆಯಾಗದೆ ಹಳ್ಳಿಗಳ ಜನರ ಜೀವನದ ಭಾಗವಾಗಬೇಕಿದೆ. ಅನಾರೋಗ್ಯದಿಂದ ಬಳಲುತ್ತಿರುವವರು, ಬಡಜನರು ಹೆಚ್ಚಾಗಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು. ಯೋಗವು ವಯಸ್ಸು, ಬಣ್ಣ, ಜಾತಿ, ಸಿರಿತನ-ಬಡತನದ ಭೇದವನ್ನು ಮೀರಿದೆ. ನಾವು ಯೋಗವನ್ನು ಜೀವನದುದ್ದಕ್ಕೂ ಪಾಲಿಸಬೇಕು ಎಂದು ಹೇಳಿದರು.