ಮೂಡಿಗೆರೆ : ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಪಟ್ಟಣದ ರೈತಭವನದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ವಿಧಾನ ಪರಿಷತ್ ಶಾಸಕ ಎಂ.ಕೆ ಪ್ರಾಣೇಶ್ ಹಾಗೂ ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸರ್ವೋತ್ತಮ ಪ್ರಶಸ್ತಿ ವಿಜೇತ ಕಾ.ದಾ ಕೃಷ್ಣರಾಜ್ ಅವರು ಮಾತನಾಡಿ ಇಂದಿನ ಆಧುನಿಕ ಜೀವನ ಶೈಲಿ ಮತ್ತು ವೃತ್ತಿ ಬದುಕಿನ ಒತ್ತಡಗಳಿಂದಾಗಿ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯದ ಸಮಸ್ಯೆಗಳು, ಬೊಜ್ಜು ಮುಂತಾದ ಖಾಯಿಲೆಗಳಿಗೆ ಯೋಗಭ್ಯಾಸ ರಾಮಬಾಣ ಆಗಬಲ್ಲದು. ಮುಖ್ಯವಾಗಿ ಬೆನ್ನು ನೋವು, ಶ್ವಾಸಕೋಶ ಸಮಸ್ಯೆ, ತಲೆ ನೋವಿನ ಸಮಸ್ಯೆ ಇರುವವರು ಯೋಗದ ಮೊರೆ ಹೋದರೆ ಶೀಘ್ರ ಗುಣಮುಖರಾಗಬಹುದು ಎಂದು ಯೋಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಹಲವು ಆಸನಗಳನ್ನು 200ಕ್ಕೂ ಹೆಚ್ಚು ಮಂದಿಗೆ ಅಭ್ಯಾಸ ಮಾಡಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರತನ್ ಕುಮಾರ್, ಬಿಜೆಪಿ ಮುಖಂಡರಾದ ಕಣಚೂರು ವಿನೋದ್, ಸಂಜಯ್ ಕೊಟ್ಟಿಗೆಹಾರ, ಜನ್ನಾಪುರ ರಘು, ಭಜರಂಗದಳದ ಮುಖಂಡರಾದ ಅವಿನಾಶ್, ಪಟ್ಟಣ ಪಂಚಾಯಿತಿ ಸದಸ್ಯ ಮನೋಜ್ ಕುಮಾರ್, ಬಾಲು ಶೆಟ್ಟಿ ವಿಶಾಲ್, ಮಗ್ಗಲಮಕ್ಕಿ ಗಣೇಶ್, ಪಟೇಲ್ ಮಂಜು, ಪತ್ರಕರ್ತರಾದ ಗೌಡಹಳ್ಳಿ ಪ್ರಸನ್ನ ಸೇರಿದಂತೆ ಪಟ್ಟಣ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಭಜರಂಗದಳ ಕಾರ್ಯಕರ್ತರು, ವಕೀಲರು, ಸ್ವಯಂ ಸೇವಕರು ಹಾಗೂ ಹಿರಿಯರು ಭಾಗಿಯಾದರು.











