ಪತ್ನಿಗೆ 4.8ಕೋಟಿ ರೂ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ ಉದ್ಯಮಿ…

216
firstsuddi

ಬೆಂಗಳೂರು : ಉದ್ಯಮಿಯೊಬ್ಬರು ತಮ್ಮ ಪತ್ನಿಗೆ 4.8 ಕೋಟಿ ರೂ ಮೌಲ್ಯದ ಲ್ಯಾಂಬೊರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದು, ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಲಾ ಫೆಮ್ಮ ಎಂಬ ಕಂಪನಿಯ ಸಿಇಓ ಆಗಿರುವ ನಿಲುಫರ್ ಶರೀಫ್ ಎಂಬುವವರು ಹೆಂಡತಿಗೆ ಇಷ್ಟವಾದ ಲ್ಯಾಂಬೊರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಲ್ಯಾಂಬೊರ್ಗಿನಿ ಹರಾಕೆನ್ ಎಂಬ ಕಾರಿನ ಬೆಲೆ 4.8 ಕೋಟಿ ರೂ ಆಗಿದ್ದು, ಕೇವಲ 3ಸೆಕೆಂಡ್‍ಗಳಲ್ಲಿ ವೇಗವನ್ನು ಗಂಟೆಗೆ 100 ಕಿ.ಮೀ ನಷ್ಟು ಹಾಗೂ ಗ್ರೌಂಡ್ ಕ್ಲಿಯರೆನ್ಸ್ ಅನ್ನು 45 ಎಂಎಂ ಹೆಚ್ಚಿಸಿಕೊಳ್ಳುವ ಸಾಮಥ್ರ್ಯವನ್ನು ಹೊಂದಿದ್ದು, ಈ ಲ್ಯಾಂಬೊರ್ಗಿನಿ ಕಾರು ಇಟಾಲಿಯನ್ ಕಾರು ಉತ್ಪಾದಕರಿಂದ ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.