ಚಾಮರಾಜನಗರ : ಕಾಡಾನೆಯೊಂದು ಕಬ್ಬು ತುಂಬಿದ ಲಾರಿಯನ್ನು ಅಡ್ಡಗಟ್ಟಿ ಒಂದೊದೇ ಕಬ್ಬನ್ನು ಎಳೆದು ತಿಂದಿರುವ ಘಟನೆ ಆಸನೂರು ಬಳಿ ನಡೆದಿದೆ. ಗಡಿ ಪ್ರದೇಶವಾದ ತಳವಾಡಿಯಿಂದ ಲಾರಿಯಲ್ಲಿ ಕಬ್ಬನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಕಾಡಾನೆ ಲಾರಿಯನ್ನು ಅಡ್ಡಗಟ್ಟಿ ತನ್ನ ಸೊಂಡಿಲಿನಿಂದ ಒಂದೊದೇ ಕಬ್ಬನ್ನು ಎಳೆದು ತಿಂದಿದ್ದು, ಲಾರಿ ಚಾಲಕ ಆನೆ ಕಬ್ಬು ತಿಂದು ಹೋಗುವವರೆಗೂ ಲಾರಿಯನ್ನು ಅಲ್ಲೇ ನಿಲ್ಲಿಸಿ ಆನೆ ಕಾಡಿನೊಳಗೆ ಹೋದ ಬಳಿಕ ಚಾಲಕ ತೆರಳಿದ್ದಾನೆ. ಆನೆ ಕಬ್ಬನ್ನು ಎಳೆದು ತಿನ್ನುತ್ತಿರುವ ದೃಶ್ಯವನ್ನು ಹಲವು ಮಂದಿ ತಮ್ಮ ಮೊಬೈಲ್ನಲ್ಲಿ ವೀಡಿಯೋ ಮಾಡಿದ್ದು, ಈಗಾ ವೈರಲ್ ಆಗಿದೆ.










