ಮೂಡಿಗೆರೆ :ಅಧಿಕಾರಿಗಳು ಗೈರಾಗದಂತೆ ಕೆ.ಡಿ.ಪಿ ಸಭೆಯಲ್ಲಿ ಪಾಲ್ಗೊಳ್ಳಬೇಕು : ಶಾಸಕ-ಎಂ.ಪಿ.ಕುಮಾರಸ್ವಾಮಿ…

574
firstsuddi

ಮೂಡಿಗೆರೆ : ಇಂದು ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆ.ಡಿ.ಪಿ ಸಭೆಯನ್ನು ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಲಾಯಿತು. ಸಭೆಯ ಪ್ರಾರಂಭದಲ್ಲೇ ಸಭೆಗೆ ಹಾಜರಾದ ಅಧಿಕಾರಿಗಳ ಹಾಜರಾತಿಯನ್ನು ಪರಿಶೀಲಿಸಿ ಮಾತನಾಡಿದ ಶಾಸಕರು ಎಲ್ಲಾ ಅಧಿಕಾರಿಗಳು ಯಾವುದೇ ಕಾರ್ಯಕ್ರಮವಿದ್ದರೂ ಕೆ.ಡಿ.ಪಿ ಸಭೆಗೆ ಗೈರಾಗದಂತೆ ತಪ್ಪದೇ ಬರಬೇಕೆಂದು ಅಧಿಕಾರಿಗಳಲ್ಲಿ ತಾಕೀತು ಮಾಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ವೈದ್ಯರ ಕುರಿತು ಪ್ರಸ್ಥಾಪಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪ್ರಭಾಕರ್ ಕೆ.ಆರ್ ಮಾತನಾಡಿ ನಮ್ಮ ಕಳಸದಲ್ಲಿ ಸರಿಯಾಗಿ ವೈದ್ಯರಿಲ್ಲದೇ ಇಲ್ಲಿನ ಜನತೆ ತುಂಬಾ ಸಂಕಷ್ಟದಲ್ಲಿದ್ದು, ನೋವಿನಲ್ಲೂ ಸಾವಿನಲ್ಲೂ ಕಷ್ಟಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಸದಲ್ಲಿ ಏನಾದರು ಅಪಘಾತವಾಗಿ ತೀರಿಕೊಂಡಲ್ಲಿ ಪೋಸ್ಟ್ ಮಾರ್ಟಂ ಮಾಡಲು ಇಲ್ಲಿ ಎಂ.ಬಿ.ಬಿ.ಎಸ್ ವೈದ್ಯರಿಲ್ಲ ಬೇರೆಯದೇ ಖಾಸಗಿ ವೈದ್ಯರು ಅದರ ಕಾರ್ಯ ಮಾಡಲು ಹೋದರೆ ಅವರಿಗೆ ಇಲ್ಲಿನ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದಂತಹ ಡಾ||ಸುಂದ್ರೇಶ್ ರವರು ಅನುಮತಿಯನ್ನು ಕೊಡವುದಿಲ್ಲ. ಈ ಕುರಿತ ಮಾಹಿತಿಯನ್ನು ಕೇಳಿದರೆ ಇಲ್ಲಿನ ಆರೋಗ್ಯಾಧಿಕಾರಿಗಳು ನಮಗೆ ಸರಿಯಾಗಿ ಸ್ಪಂದಿಸುವುದು ಅಥವಾ ಇಂತಹ ವಿಷಯದ ಬಗ್ಗೆ ಮಾಹಿತಿಯನ್ನು ನಮಗೆ ಪೂರಕವಾಗಿ ಕೊಡುವುದಿಲ್ಲ ಎಂದು ಸಭಾದ್ಯಕ್ಷರಿಗೆ ತಿಳಸಿದಲ್ಲದೇ ನೀವು ನಮಗಾಗಿ ಕೆಲಸ ಮಾಡಬೇಡಿ ಇಲ್ಲಿನ ಜನತೆಗಾಗಿ ಕೆಲಸ ಮಾಡಿ ಎಂದರು.
ಸಭೆಯಲ್ಲಿ ತಾಲ್ಲೂಕಿನ ಆಸ್ಪತ್ರೆಯಲ್ಲಿ ನಾಯಿ ಕಡಿತ ಹಾಗೂ ಹಾವು ಕಡಿತದ ಔಷದಿಯ ಲಭ್ಯತೆಯ ಬಗ್ಗೆ ಮಾಹಿತಿ ಕೇಳಿದಾಗ ಇದಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿಗಳು ನಾಯಿ ಕಡಿತಕ್ಕೆ ಔಷದಿ ಕೊರತೆ ಇದೆ. ಆದರೆ ಹಾವು ಕಡಿತಕ್ಕೆ ಔಷದಿಯ ಕೊರತೆ ಇರುವುದಿಲ್ಲ ಎಂದಾಗ ಇದಕ್ಕೆ ಸ್ಪಂಧಿಸಿದ ವಿಧಾನ ಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್ ಮಾತನಾಡಿ ನಮಗೆ ಸದನದಲ್ಲಿ ಇಡೀ ರಾಜ್ಯದಲ್ಲಿ ಯಾವುದೇ ಔಷದಿಗಳಿಗೆ ಕೊರತೆ ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಆದರೆ ಇದರ ಬಗ್ಗೆ ಸದನದಲ್ಲಿ ಮತ್ತೊಂದು ಭಾರಿ ಚರ್ಚಿಸಿ ಕೊರತೆಯನ್ನು ನೀಗಿಸಲು ಪ್ರಯತ್ನ ಪಡುತ್ತೇನೆ ಎಂದರು.
ಪೋಲೀಸ್ ಇಲಾಖೆ ಅಪಘಾತವನ್ನು ತಡೆಯುವ ನಿಟ್ಟಿನಲ್ಲಿ ಮಾನ್ಯ ಸರ್ವೊಚ್ಚ ನ್ಯಾಯಾಲಯದ ಆದೇಶದಂತೆ ಕೆಲವೊಂದು ಮಹತ್ವವಾದ ಕೆಲಸವನ್ನು ಮಾಡುತ್ತಿದ್ದು ಅದರಲ್ಲಿ ಗೂಡ್ಸ್ ಆಟೋಗಳಲ್ಲಿ ಸಾರ್ವಜನಿಕರನ್ನು ಕೂರಿಸಿಕೊಂಡು ಹೋಗುವ ವಾಹನಕ್ಕೆ ದಂಡ ವಿದಿಸಿ ಎಚ್ಚರಿಕೆ ಕೊಟ್ಟು ಕಳಿಸುತ್ತೇವೆ. ಪದೇ ಪದೇ ಈ ಪ್ರಕರಣಗಳು ಮುಂದುವರಿದಲ್ಲಿ ಅಂತಹ ವಾಹನವನ್ನು ಸೀಸ್ ಮಾಡುವ ಕುರಿತು ನಿರ್ಧಾರ ತೆಗೆದುಕೊಂಡಿದ್ದು, ಹಾಗೆಯೇ ಮಾನ್ಯ ಸಾರಿಗೆ ಇಲಾಖೆ ಅನುಮತಿಯನ್ನು ಮೀರಿದ ಮತ್ತು ಆಟೋ ರಿಕ್ಷಾದಲ್ಲಿ ಲೆಕ್ಕಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಸಾರಿಗೆ ಇಲಾಖೆಯ ಅನುಮತಿ ಇಲ್ಲದೇ ಕೊಂಡುಯ್ಯುವರಿಗೆ ಹದ್ದಿನ ಕಣ್ಣನ್ನು ನಾವು ಇಟ್ಟಿದ್ದೇವೆ ಎಂದು ಸಭೆಗೆ ಮೂಡಿಗೆರೆ ಪೋಲಿಸ್ ಆರಕ್ಷಕ ನಿರೀಕ್ಷಕರಾದ ರಮೇಶ್ ಮಾಹಿತಿ ನೀಡಿದಾಗ ಮಧ್ಯಪ್ರವೇಶ ಮಾಡಿ ಮಾತನಾಡಿದ ವಿ.ಪ.ಸದಸ್ಯರಾದ ಪ್ರಾಣೇಶ್ ನೀವು ಯಾವುದೇ ಕ್ರಮ ಕೈಗೊಳ್ಳುವುದಿದ್ದರೂ ಜನಸ್ನೇಹಿಯಾಗಿ ಕೆಲಸಮಾಡಿ ಹಾಗೂ ಇಲ್ಲಿನ ಜನರ ವಿಶ್ವಾಸವನ್ನು ಗಳಿಸಿ ಸರ್ಕಾರದ ಕೆಲಸ ಮಾಡುವಾಗ ನಿಮ್ಮ ಸಹಕಾರ ತುಂಬಾ ಪ್ರಾಮುಖ್ಯತೆ ಪಡೆಯುತ್ತದೆ ಎಂದರು.
ಕಂದಾಯ ಇಲಾಖೆ ಜಾಗದಲ್ಲಿ ನಿಮ್ಮ ಪ್ರಭಾವವನ್ನು ಬಳಸಬೇಡಿ ಮಾನ್ಯ ಜಿಲ್ಲಾಧಿಕಾರಿಗಳು ತಿಳಿಸಿದಂತೆ ಡೀಮ್ಡ್ ಫಾರೆಸ್ಟ್ ಜಾಗವು ಅದನ್ನು ಗಜೆಟ್ ಮಾಡಿದ ನಂತರವಷ್ಟೆ ಅದರ ಅಂತಿಮ ನಿರ್ಧಾರಕ್ಕೆ ಬರುವುದು ಅದನ್ನು ಬಿಟ್ಟು ಇದೆಲ್ಲಾ ನಮ್ಮದೇ ಜಾಗವೆಂಬತೆ ತೀರ್ಮಾನಿಸಿ ಇಲ್ಲಿಯ ಜನರಿಗೆ ತೊಂದರೆ ಕೊಡಬೇಡಿ ಎಂದು ಸಭಾಧ್ಯಕ್ಷರು ವಲಯ ಅರಣ್ಯಾಧಿಕಾರಿಗಳಿಗೆ ಕಿವಿಮಾತನ್ನು ಹೇಳಿದರು ಅದಲ್ಲದೇ ಜಿಲ್ಲಾಡಿಳಿತ ಹಾಗೂ ಸರ್ಕಾರ ತಿಳಿಸಿದಂತೆ ಮರಮಾಲ್ಕಿ ಸರ್ಕಾರಕ್ಕೆ ಕಾಯ್ದಿರಿಸಿದೇ ಎಂಬ ನಿಯಮವಿದ್ದರೂ ನೀವು ಹೋಗಿ ಅಲ್ಲಿಯೇ ಟ್ರಂಚ್ ನಿರ್ಮಾಣ ಮಾಡಿ ಇಲ್ಲಿನ ರೈತರಿಗೆ ತೊಂದರೆಯನ್ನು ನೀಡುತ್ತೀರಾ ಎಂದಾಗ ಅದಕ್ಕೆ ಮಾತನಾಡಿದ ವಲಯ ಅರಣ್ಯಾಧಿಕಾರಿಗಳು ನಾವು ಯಾವುದೇ ದುರುದ್ದೇಶದಿಂದ ಕೆಲಸಮಾಡುತ್ತಿಲ್ಲ ಆನೆಯ ಕಾಟ ಅಧಿಕವಿರುವುದರಿಂದ ಇಂತಹ ಕ್ರಮವನ್ನು ಕೈಗೆತ್ತಿಕೊಂಡಿರುತ್ತೇವೆ. ಹಾಗೆಯೆ ಈ ಭಾರಿ 23,13000 ರೂ ಬೆಳೆ ಪರಿಹಾರವನ್ನು ನೀಡಿದ್ದೇವೆ ಆನೆಯ ಉಪಟಳವನ್ನು ತಡೆಯಲು ಈಗಾಗಲೆ ಸರ್ಕಾರ ರೈಲು ಅಳಿಯನ್ನು ಅಳವಡಿಸಲು ಅನುಧಾನ ಬಿಡುಗಡೆಗೊಳಿಸಿದ್ದು ಇದರಿಂದ ಸಮರ್ಪಕವಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅಸಾದ್ಯವಾಗಿದ್ದು ಹೆಚ್ಚಿನ ಅನುದಾನಕ್ಕೆ ಸರ್ಕಾರದೊಂದಿಗೆ ಬೇಡಿಕೆ ಇಡಬೇಕೆಂದು ಎಂದು ಸಭೆಗೆ ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಕೆ.ಸಿ.ರತನ್, ಉಪಾದ್ಯಕ್ಷರಾದ ಸವಿತಾ ರಮೆಶ್, ಸ್ಥಾಯಿ ಸಮೀತಿ ಅಧ್ಯಕ್ಷರಾದ ಸುಂದರ್ ಕುಮಾರ್,ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಮಿತಾ ಮುತ್ತಪ್ಪ,ಶ್ಯಾಮಣ್ಣ ಬಣಕಲ್,ಸುದಾಯೋಗೀಶ್, ತಹಸಿಲ್ದಾರಾದಂತಹ ಪದ್ಮನಾಭಶಾಸ್ತ್ರಿ ಸೇರಿದಂತೆ ಇತರರು ಇದ್ದರು.