ಬರ್ಮಿಂಗ್ ಹ್ಯಾಂ : ಭಾರತ ಮತ್ತು ಬಾಂಗ್ಲದೇಶದ ನಡುವೆ ನಿನ್ನೆ ನಡೆದ ಪಂದ್ಯದ ವೇಳೆ 87 ವರ್ಷದ ಹಿರಿಯ ಅಭಿಮಾನಿ ಚಾರುಲತಾ ಪಟೇಲ್ ಎಂಬುವವರು ನಡೆದಾಡಲು ಆಗದೆ ವೀಲ್‍ಚೇರ್‍ನಲ್ಲಿ ಬಂದು ಕೈಯಲ್ಲಿ ಪೀಪಿ ಹಿಡಿದು ಇತರೆ ಅಭಿಮಾನಿಗಳೊಂದಿಗೆ ಕುಣಿದು ಕುಪ್ಪಳಿಸುತ್ತಾ ಭಾರತ ತಂಡಕ್ಕೆ ಬೆಂಬಲ ಸೂಚಿಸಿದ್ದು, ವೀಡಿಯೋ ಈಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಹಾಗೂ ಎಲ್ಲಾ ಆಟಗಾರರು ಪಂದ್ಯ ಮುಗಿದ ಬಳಿಕ ಅಜ್ಜಿಯ ಆಶೀರ್ವಾದ ಪಡೆದಿದ್ದು,

ನಾಯಕ ವಿರಾಟ್ ಕೊಹ್ಲಿ ಅವರು ಅಜ್ಜಿಯಿಂದ ಆಶೀರ್ವಾದ ಪಡೆದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಪಂದ್ಯ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಾರುಲತಾ ಅವರು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಭಾರತ ಈ ಬಾರಿ ಪಕ್ಕಾ ವಿಶ್ವಕಪ್ ಗೆಲ್ಲುತ್ತದೆ. 1983ರಲ್ಲಿ ನಡೆದ ವಿಶ್ವಕಪ್ ಪಂದ್ಯದ ವೇಳೆ ಕಪಿಲ್‍ದೇವ್ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಾಗ ನಾನು ಮೈದಾನದಲ್ಲೇ ಇದ್ದೇ. ಈ ಬಾರಿಯು ನಾನು ಭಾರತ ತಂಡ ಗೆಲ್ಲುವುದನ್ನು ಬಂದು ಕಣ್ತುಂಬಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
You've got to love this passion!#TeamIndia | #BANvIND | #CWC19 pic.twitter.com/v1BHcWB7Lx
— Cricket World Cup (@cricketworldcup) July 2, 2019









