ಮಾಧ್ಯಮದವರ ಮೇಲೆ ಅಸಮಾಧಾನವನ್ನು ಹೊರಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ…

353
firstsuddi

ಬೆಂಗಳೂರು : ರಾಜೀನಾಮೆ ನೀಡಿರುವ ಕೆಲವು ಶಾಸಕರು ಸಿದ್ದರಾಮಯ್ಯ ಅವರ ಆಪ್ತರು ಎಂದು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದುದನ್ನು ಗಮನಿಸಿದ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಮಾಧ್ಯಮದವರ ಮೇಲೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು ಮಾತ್ರವಲ್ಲ, ಕಾಂಗ್ರೆಸ್ನ ಎಲ್ಲ 78 ಶಾಸಕರೂ ನನಗೆ ಆಪ್ತರಾಗಿದ್ದಾರೆ. ಅವರು ನಮ್ಮ ಪಕ್ಷದ ಬಹಳಷ್ಟು ನಾಯಕರಿಗೂ ಆಪ್ತರಾಗಿದ್ದಾರೆ. ಮಾಧ್ಯಮಗಳು ಸೆಲೆಕ್ಟಿವ್ ಆಗಿ ಈ ಶಾಸಕರು ನನ್ನ ಆಪ್ತರು ಎಂದು ಹೇಳುತ್ತಿರುವುದು ಸರಿ ಅಲ್ಲ. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.