ಯಾರನ್ನೂ ಖುಷಿಪಡಿಸಲು ಹಾಗೂ ಅಸಂತೋಷಪಡಿಸಲು ನಾನೇನು ನೃತ್ಯಗಾರ್ತಿಯಲ್ಲ : ರಮೇಶ್ ಕುಮಾರ್…

225
firstsuddi

ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜ್ಯದ ಜನತೆಯ ಮನಸ್ಸಿನಲ್ಲಾದ ನೋವಿಗೆ ನಾನು ಗೌರವ ಕೊಡುತ್ತೇನೆ. ರಾಜ್ಯ ಜನತೆಯ ನೋವಿಗೆ ಗೌರವ ಕೊಡುವುದು ನನ್ನ ಆದ್ಯ ಕರ್ತವ್ಯ. ಅದರಿಂದ ನಾನು ವಿಮುಖನಾಗುವುದಿಲ್ಲ. ಅತೃಪ್ತರ ರಾಜೀನಾಮೆ ವಿಷಯದಲ್ಲಿ ನಾನು ಸಂವಿಧಾನವನ್ನು ಅನುಸರಿಸಿಕೊಂಡು ಹೋಗುತ್ತೇನೆ. ಸಂವಿಧಾನದಲ್ಲಿ ಹೇಳಿರುವುದಕ್ಕೆ ನಾನು ಅಪಚಾರ ಮಾಡುವುದಿಲ್ಲ. ಸಂವಿಧಾನದ ಮೇಲೆ ನಾನು ಅತ್ಯಾಚಾರ ಮಾಡುವುದಿಲ್ಲ. ಯಾರನ್ನೂ ಖುಷಿಪಡಿಸಲು ಹಾಗೂ ಅಸಂತೋಷಪಡಿಸಲು ನಾನೇನು ನೃತ್ಯಗಾರ್ತಿಯಲ್ಲ. ಸಂವಿಧಾನದ ವತಿಯಿಂದ ನೇಮಕವಾಗ ಒಬ್ಬ ಪ್ರತಿನಿಧಿ ಅಷ್ಟೇ. ನಿನ್ನೆ ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಕ್ರಮಬದ್ಧವಿಲ್ಲದ ಕಾರಣ ಮತ್ತೊಮ್ಮೆ ರಾಜೀನಾಮೆಯನ್ನು ಕೊಡುವುದಕ್ಕೆ ಬಂದಿದ್ದರು. ಈ ಬಗ್ಗೆ ಶಾಸಕರನ್ನು ವಿಚಾರಣೆ ಮಾಡಲು ಸಮಯ ನಿಗದಿ ಮಾಡಿದ್ದೇನೆ ಎಂದು ಹೇಳಿದರು.