ಪೊಲೀಸ್ ಠಾಣೆಯೊಳಗೆ ಟಿಕ್ ಟಾಕ್ ವೀಡಿಯೋ ಡ್ಯಾನ್ಸ್ ಮಾಡಿದ ಮಹಿಳಾ ಪೊಲೀಸ್ ಪೇದೆ ಅಮಾನತು…

553
firstsuddi

ಗಾಂಧಿನಗರ : ಮಹಿಳಾ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಠಾಣೆಯೊಳಗೆ ಟಿಕ್ ಟಾಕ್ ವೀಡಿಯೋ ಡ್ಯಾನ್ಸ್ ಮಾಡಿದ ಹಿನ್ನೆಲೆ, ಪೊಲೀಸ್ ಅಧಿಕಾರಿಗಳು ಅರ್ಪಿತಾ ಚೌಧರಿ ಎಂಬ ಮಹಿಳಾ ಪೊಲೀಸ್ ಪೇದೆಯನ್ನು ಕೆಲಸದಿಂದ ಅಮಾನತು ಮಾಡಿರುವ ಘಟನೆ ಗುಜರಾತಿನಲ್ಲಿ ನಡೆದಿದೆ. ಗುಜರಾತಿನ ಲಂಗ್ನಾಜ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಲಾಕಪ್ ಮುಂದೆಯೇ ಟಿಕ್ ವೀಡಿಯೋ ಮಾಡಿ ಡ್ಯಾನ್ಸ್ ಮಾಡಿದ್ದು, ವೀಡಿಯೋ ಈಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಅರ್ಪಿತಾ ಚೌಧರಿ ಅವರನ್ನು ಅಮಾನತು ಮಾಡಿದ್ದು, ಅವರು ಕರ್ತವ್ಯದಲ್ಲಿದ್ದಾಗ ಸಮವಸ್ತ್ರ ಧರಿಸದೇ ಹಾಗೂ ಶಿಸ್ತನ್ನು ಪಾಲಿಸದೇ ಠಾಣೆಯೊಳಗೆ ಟಿಕ್ ಟಾಕ್ ವೀಡಿಯೋ ಡ್ಯಾನ್ಸ್ ಮಾಡಿದ್ದಾರೆ. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಉಪ ಅಧೀಕ್ಷಕ ಪೊಲೀಸ್ ಮಂಜಿತಾ ವಂಜಾರಾ ಅವರು ತಿಳಿಸಿದ್ದಾರೆ.