ಬಣಕಲ್ : ಜೆಸಿಐ ವಿಸ್ಮಯ ಸಂಸ್ಥೆಯ ವತಿಯಿಂದ ಬಣಕಲ್ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಡೇಂಗ್ಯೂ, ಕ್ಷಯ ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಹಾಗೂ ಮಕ್ಕಳ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ಕಾರ್ಯಾಗಾರವನ್ನು ಜಿಲ್ಲಾ ಆರೋಗ್ಯ ಇಲಾಖೆಯ ಬ್ಲಾಕ್ ಹೆಲ್ತ್ ಎಜುಕೇಟರ್ ಶ್ರೀಮತಿ ಜಲಜಾಕ್ಷಿಯವರು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎನ್ ಟಿ ದಿನೇಶ್, ಕಾರ್ಯದರ್ಶಿ ಶರತ್ ಗೌಡ ಫಲ್ಗುಣಿ, ಜೇಸಿರೇಟ್ಸ್ ಅಧ್ಯಕ್ಷರಾದ ರಜಿತಾ ರತ್ನಾಕರ್, ಸ್ವಾತಿ ನವೀನ್, ಅರ್ಚನಾ ಸುಂದರೇಶ್, ಆಶಾ ಕಾರ್ಯಕರ್ತೆಯರು ಮತ್ತು ಕಾಲೇಜಿನ ಪ್ರಾಂಶುಪಾಲರಾದ ಜಗನ್ನಾಥ್ ಹಾಗೂ ಉಪನ್ಯಾಸಕರು ಹಾಜರಿದ್ದರು.
Home ಸ್ಥಳಿಯ ಸುದ್ದಿ ಬಣಕಲ್ : ಜೆಸಿಐ ವಿಸ್ಮಯ ವತಿಯಿಂದ ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಕಾರ್ಯಕ್ರಮ…










