ಚಿಕ್ಕಮಗಳೂರು : ಮಲೆನಾಡು ಭಾಗಗಳಲ್ಲಿ ಮುಂದುವರೆದ ಮಳೆ ಬಾಳೆಹೊನ್ನೂರು-ಜಯಪುರ ಮಾರ್ಗ ಮಧ್ಯೆ ಭೂ ಕುಸಿತ…

387
firstsuddi

ಚಿಕ್ಕಮಗಳೂರು : ಮಲೆನಾಡು ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಬಾರಿ ಮಳೆಯಿಂದಾಗಿ ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಾಳೆಹೊನ್ನೂರು-ಜಯಪುರ ಮಾರ್ಗ ಮಧ್ಯೆ ಭೂ ಕುಸಿತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕಳೆದ ವರ್ಷವೂ ಇದೇ ಜಾಗದಲ್ಲಿ ಭೂ ಕುಸಿತವಾಗಿತ್ತು. ಈ ಬಾರಿ ಮತ್ತೆ ಭೂ ಕುಸಿತವಾದ ಕಾರಣ ವಾಹನ ಸವಾರರು ಭಯದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.