ಚಿಕ್ಕಮಗಳೂರು : ಮಲೆನಾಡು ಭಾಗಗಳಲ್ಲಿ ಭಾರಿ ಮಳೆ ಹಿನ್ನೆಲೆ, ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕಲ್ಲತ್ತಿಗಿರಿ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಜಲಪಾತದ ಒಳಭಾಗದಲ್ಲಿರುವ ಕಲ್ಲತ್ತಿಗಿರಿ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತಾದಿಗಳು ಸಿಲುಕಿದ್ದರು. ದೇವಾಲಯದಿಂದ ಹೊರ ಬರಲಾಗದೆ ಭಕ್ತಾದಿಗಳು ಪರದಾಡುವಂತಾಗಿದ್ದು, ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಅಗ್ಗ ಕಟ್ಟಿ ಭಕ್ತಾದಿಗಳನ್ನು ಒಬ್ಬೊಬ್ಬರನ್ನೇ ರಕ್ಷಣೆ ಮಾಡಿ ದಡ ಸೇರಿಸಿದ್ದಾರೆ.









