ಫಸ್ಟ್ ಸುದ್ದಿ : ದಾಂಪತ್ಯದಲ್ಲಿ ಸಂಗಾತಿ ಹೀಗೆ ಇರಬೇಕು ನನ್ನ ಬಳಿ ಹೀಗೆ ನಡೆದುಕೊಳ್ಳಬೇಕೆನ್ನುವುದು ನಿಮ್ಮ ಸಂತೋಷ ಹಾಗೂ ಸುಖಕರ ಜೀವನಕ್ಕೆ ಒಳ್ಳೆಯದಲ್ಲ. ಪ್ರತೀ ಕ್ಷಣವೂ ನನ್ನ ಜೊತೆಯಲ್ಲಿ ಸಂಗಾತಿ ರೊಮ್ಯಾಂಟಿಕ್ ಮೂಡ್ ನಲ್ಲಿಯೇ ಇರಬೇಕೆನ್ನುವುದನ್ನೂ ಸಂಪೂರ್ಣವಾಗಿ ಮರೆತುಬಿಡಿ. ಒಂದು ಕ್ಷಣ ಇವೆಲ್ಲಾ ಗೊತ್ತಿಲ್ಲದೇ ನಡೆದು ಹೋದರೆ ಸಂಬಂಧಗಳು ಮುರಿದು ಬೀಳುವ ಹಂತಕ್ಕೂ ಹೋಗಬಹುದು. ಅಲ್ಲಿ ಮುರಿದು ಬೀಳುವುದದಕ್ಕಿಂತ ಮುನ್ನ ನಾನೆಲ್ಲಿ ಜಾಗೂರಕತೆಯಿಂದ ಇರಬೇಕೆನ್ನುವುದನ್ನು ನೆನೆಪು ಮಾಡಿಕೊಂಡು ಸರಿ ಮಾಡಿಕೊಂಡರೆ ಆಯಿತು. ಹಾಗಾದಲ್ಲಿ ದಾಂಪತ್ಯದಲ್ಲಿ ಎಲ್ಲೆಲ್ಲಿ ತಪ್ಪುಗಳಾಗುತ್ತವೆ ಗೊತ್ತಾ ? ಇದಕ್ಕಾಗಿ ಒಬ್ಬರನ್ನೊಬ್ಬರು ದೂಷಿಸುವ ಬದಲು ನಿಮ್ಮ ಶೃಂಗಾರಮಯ ಜೀವನಕ್ಕೆ ಮಾರಕವಾದ ಅಂಶಗಳಾದರೂ ಯಾವುವು ಎಂಬ ಬಗ್ಗೆ ಯೋಚನೆ ಮಾಡಬೇಕು.
ವಾರಪೂರ್ತಿ ದುಡಿದು, ಕೆಲಸ ಮಾಡಿ ಸುಸ್ತಾಗಿರ್ತೀರಾ, ದೇಹಕ್ಕೆ ನಿರಾಳತೆಯನ್ನು ತಂದುಕೊಡುವುದು ಭಾನುವಾರ ಮಾತ್ರ. ಹೀಗಾಗಿ ಎಲ್ಲರಿಗೂ ಆ ದಿನ ತುಂಬಾ ಹೊತ್ತು ನಿದ್ರೆ ಮಾಡಿ ಬಿಡೋಣ ಎನ್ನಿಸುವುದು ಸಹಜ. ಆದರೆ ಆ ದಿನ ನಿಮ್ಮ ಸಂಗಾತಿ ರೋಮ್ಯಾಂಟಿಕ್ ಸಿನಿಮಾವನ್ನು ಏಕಾಂಗಿಯಾಗಿ ನೋಡುವುದಕ್ಕೆ ಪೂರ್ಣ ವಿರಾಮ ಹಾಕಬೇಕು ಎಂದರ್ಥವಲ್ಲ. ಪ್ರತಿ ಸಂಬಂಧವೂ ಒಂದಿಷ್ಟು ಗುಣಮಟ್ಟದ ಸಮಯವನ್ನು ಬಯಸುತ್ತದೆ. ಹೀಗಾಗಿ ಇಡೀ ದಿನ ನಿಮ್ಮ ಜೊತೆಯೇ ಬೆಡ್ನಲ್ಲಿ ಸಂಗಾತಿಯೂ ಬಿದ್ದಿರಬೇಕು ಎಂದು ಭಾವಿಸಬಾರದು. ಹೀಗಾಗಿ ನೀವು ಸೋಮಾರಿತನದ ಗುಣವನ್ನು ಬಿಟ್ಟು ಸಂಗಾತಿ ಜೊತೆ ಸರಿಯಾಗಿ ವರ್ತಿಸಬೇಕು. ಇಲ್ಲ ನಿದ್ರೆಯೇ ನನಗೆ ಮುಖ್ಯ ಎಂದು ಭಾವಿಸಿದರೆ ಸಂಬಂಧ ಹದಗೆಡುವುದರಲ್ಲಿ ಸಂದೇಹವಿಲ್ಲ.
ಇನ್ನು ನಿಮ್ಮ ಶೃಂಗಾರ ಜೀವನವನ್ನು ಕೊಲ್ಲುವ ಅತಿ ದೊಡ್ಡ ಅಂಶವೆಂದರೆ ವಾದಕ್ಕಿಳಿಯುವುದು. ಇಬ್ಬರೂ ಒಬ್ಬರಿಗೊಬ್ಬರು ವಾದ ಮಂಡಿಸುತ್ತಲೇ ಇದ್ದರೆ ಖಚಿತವಾಗಿಯೂ ರಜಾ ದಿನದ ಖುಷಿಯನ್ನು ಕಳೆದುಕೊಳ್ಳುವುದು ಖಂಡಿತ. ಒಬ್ಬರನ್ನೊಬ್ಬರು ಹೀಗಳೆಯುವ ಬದಲು ಗುಣಮಟ್ಟದ ಸಮಯ ಕಳೆಯಲು ಪ್ರಯತ್ನ ಮಾಡಿ.
ಆಫೀಸ್ನಲ್ಲಿ ಹೇಗೂ ನೀವು ಕಂಪ್ಯೂಟರ್, ಮೊಬೈಲ್ ಎಂದು ಕಾಲ ಕಳೆಯುತ್ತೀರಿ. ಹಾಗಂತ ಮನೆಗೆ ಬಂದ ನಂತರವೂ ಮೊಬೈಲ್ ನೋಡಿಕೊಂಡು ಅಥವಾ ಟಿವಿ ನೋಡಿಕೊಂಡು ಕೂರಬೇಡಿ. ನಿಮ್ಮ ಸಂಗಾತಿಯ ಕಡೆಗೆ ಗಮನ ಹರಿಸಿ. ಇಲ್ಲವಾದರೆ ಸಾಮರಸ್ಯದ ಕೊರತೆ ಎದ್ದು ಕಾಣುತ್ತದೆ.
ಚಿಕ್ಕ ವಿಷಯವನ್ನು ದೊಡ್ಡದಾಗಿ ಮಾಡಿ ನಾಟಕೀಯ ಬೆಳವಣಿಗೆ ನಡೆಯುವಂತೆ ಮಾಡಿದರೆ, ನಿಮಗೆ ಡ್ರಾಮಾ ಕ್ವೀನ್ ಎಂಬ ಹಣೆಪಟ್ಟಿ ಬರುವುದು ಖಚಿತ. ಸಾಮಾನ್ಯವಾಗಿ ಹುಡುಗರು ಇಂತಹ ವರ್ತನೆಯನ್ನು ಇಷ್ಟ ಪಡುವುದೇ ಇಲ್ಲ. ಯಾವುದೇ ವಿಷಯವಿರಲಿ ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಜಗಳವಾಡಿ ದಿನವನ್ನು ಅಂತ್ಯಗೊಳಿಸಬಾರದು. ಯಾವಾಗಲೂ ಕೆಟ್ಟ ವಿಷಯಗಳನ್ನು ಮರೆತು ಸಂಗಾತಿಯ ಒಳ್ಳೆಯ ವಿಷಯಗಳ ಬಗ್ಗೆ ಯೋಚನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು.
ಹೌದು ಇದು ಕೂಡ, ನಿಮ್ಮ ಮಧುರ ಬಾಂಧವ್ಯವನ್ನು ಹಾಳು ಮಾಡುತ್ತದೆ. ಮನೆಯಲ್ಲಿ ಪತ್ನಿಯ ಆಸೆಗಳನ್ನು ಈಡೇರಿಸುವುದನ್ನು ಮರೆತು ನೀವು ಫ್ರೆಂಡ್ಸ್ ಜೊತೆ ಟೈಮ್ ಸ್ಪೆಂಡ್ ಮಾಡಿದರೆ ಪತ್ನಿಗೆ ನಿರಾಸೆಯಾಗುವುದು ಖಂಡಿತಾ. ಇದನ್ನೆ ನೀವು ಮುಂದುವರೆಸಿಕೊಂಡು ಹೋದರೆ ದಾಂಪತ್ಯ ಜೀವನ ನೀರಸವಾಗುತ್ತದೆ.










