ಮೂಡಿಗೆರೆ : ಮಕ್ಕಳಿಗೆ ಪೌಷ್ಠಿಕ ಕೊರತೆಯ ಬಗ್ಗೆ ನಿಗಾವಹಿಸುವುದರೊಂದಿಗೆ ಮಕ್ಕಳ ಆರೋಗ್ಯವನ್ನು ಕಾಪಾಡಿ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಜಲಜಾಕ್ಷಿ ತಿಳಿಸಿದರು.
ಹೆಸಗಲ್ ಗ್ರಾಮ ಪಂಚಾಯಿತಿಯ ಸುಬಾಷ್ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೇಬಿ ಶೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪೋಷಕರಿಗೆ ಕರೆ ನೀಡಿದರು. ಮಕ್ಕಳ ವಯಸ್ಸಿಗನುಗುಣವಾಗಿ ಬೆಳವಣಿಗೆ ಬಗ್ಗೆ ಹಾಗೂ ವಿಟಮಿನ್ ಎ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು. ಕಡಿಮೆ ತೂಕವಿರುವ ಮಕ್ಕಳನ್ನು ಎನ್ಆರ್ಸಿ ಚಿಕ್ಕಮಗಳೂರಿಗೆ ಕರೆತರುವಂತೆ, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಕಾರ್ಡ್ ಮತ್ತು 104 ಉಚಿತ ದೂರವಾಣಿ ಸಂಖ್ಯೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಗ್ರಾಮಪಂಚಾಯಿತಿ ಸದಸ್ಯ ಮೊಹಿದ್ದಿನ್ ಶೇಟ್ ಉದ್ಘಾಟಿಸಿ ಇಂದಿನ ದಿನಗಳಲ್ಲಿ ಮೊಬೈಲ್ ಎಂಬ ಮಹಾಮಾರಿ ವಿದ್ಯಾರ್ಥಿಗಳನ್ನು ಹಾಳು ಮಾಡುತ್ತಿದ್ದು, ಸಣ್ಣ ಮಕ್ಕಳು ಸಹ ಮೊಬೈಲ್ ಬೇಕೆಂದು ಹಠ ಹಿಡಿಯುತ್ತಿದ್ದಾರೆ. ಮೊಬೈಲ್ ನಿಂದ ಮಕ್ಕಳನ್ನು ದೂರವಿಡಲು ಪ್ರತಿಯೊಬ್ಬ ಪೋಷಕರು ಗಮನ ಹರಿಸುವುದರೊಂದಿಗೆ ಗ್ರಾಮೀಣ ಆಟಗಳಾದ ಕಬ್ಬಡ್ಡಿ, ಕೋಕೋ ಅಂತಹ ಆಟಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮಹಿಳಾ ಆರೋಗ್ಯ ಸಹಾಯಕಿ ಬೇಬಿ ಸಿಸ್ಟರ್, ಶಾಂತ ಸಿಸ್ಟರ್, ಅಂಗನವಾಡಿ ಕಾರ್ಯಕರ್ತರುಗಳಾದ ಅನಿತಾ, ಆಶಾ, ರಜನಿ, ಪವಿತ್ರ, ಉಪಸ್ಥಿತರಿದ್ದರು. ಬೇಬಿ ಶೋ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಪೋಷಕರು ಮಕ್ಕಳಿಗೆ ಪೌಷ್ಠಿಕ ಕೊರತೆಯ ಬಗ್ಗೆ ನಿಗಾವಹಿಸುವುದರ ಜೊತೆಗೆ ಮಕ್ಕಳ ಆರೋಗ್ಯವನ್ನು ಕಾಪಾಡಬೇಕು...










