ಕಳಸ : ನಾಯಿ ಬಾಯಿಂದ ಕಾಡು ಕುರಿಯನ್ನು ರಕ್ಷಿಸಿದ ಸ್ಥಳೀಯರು…

455
firstsuddi

ಕಳಸ: ನಾಯಿಯೊಂದು ಅಟ್ಟಾಡಿಸಿಕೊಂಡು ಬಂದ ಕಾಡು ಕುರಿಯನ್ನು ಹಿಡಿದು ಸ್ಥಳೀಯರು ರಕ್ಷಿಸಿದ್ದಾರೆ. ಕಳಸ ಕಲಶೇಶ್ವರ ದೇವಸ್ಥಾನ ಸಮೀಪದ ಗುಡ್ಡದ ಕಡೆಯಿಂದ ನಾಯಿಗಳು ಕಾಡುಕುರಿಯನ್ನು ಅಟ್ಟಾಡಿಸಿಕೊಂಡು ಬಂದಿವೆ. ಇದನ್ನು ಗಮನಿಸಿದ ಸ್ಥಳೀಯರು ನಾಯಿ ಬಾಯಿಂದ ಕುರಿಯನ್ನು ರಕ್ಷಿಸಿದ್ದಾರೆ. ಕುರಿಯ ಬಾಯಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಲಾಗಿದೆ. ಕೂಡಲೇ ಸ್ಥಳಕೆ ಆಗಮಿಸಿದ ಅರಣ್ಯ ಇಲಾಖಾ ಸಿಬ್ಬಂದಿಗಳು ಕುರಿಯನ್ನು ತೆಗೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಕಾಡಿಗೆ ಬಿಟ್ಟಿದ್ದಾರೆ.