ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಚಿನ್ನದ ಕೇದಾರನಾಥ ದೇವಾಲಯ ನಿರ್ಮಿಸಿದ ಅಭಿಮಾನಿ…

234
firstsuddi

ಕಾರವಾರ : ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯೊಬ್ಬರು ಸುಮಾರು 30ಗಂಟೆಯಲ್ಲಿ ಚಿನ್ನದ ಕೇದಾರನಾಥ ದೇವಾಲಯದ ಪ್ರತಿಮೆಯನ್ನು ನಿರ್ಮಿಸಿ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲು ಸಜ್ಜಾಗಿದ್ದಾರೆ. ಕಾರವಾರ ಕಡವಾಡದ ನಿವಾಸಿ ಮಿಲಿಂದ ಉದಯಕಾಂತ ಅಣ್ವೇಕರ್ ಎಂಬುವವರು ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯಾಗಿದ್ದು, ಇವರು ಮೋದಿಯವರ ಮೇಲಿನ ಅಭಿಮಾನದಿಂದ ಕೇದಾರನಾಥ ದೇವಾಲಯದ ಪ್ರತಿಮೆಯನ್ನು ನಿರ್ಮಿಸಿ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲು ತಯಾರಿ ನಡೆಸಿದ್ದಾರೆ. ಅಣ್ವೇಕರ್ ಅವರು ಈ ಪ್ರತಿಮೆಯನ್ನು ಸುಮಾರ್ 30 ಗಂಟೆಯಲ್ಲಿ ನಿರ್ಮಿಸಿದ್ದು, ದೇವಾಲಯದ ಗರ್ಭಗುಡಿಯಲ್ಲಿ 4mm ನ ಚಿಕ್ಕ ಚಿನ್ನದ ಶಿವಲಿಂಗವನ್ನು ಕೂಡಾ ನಿರ್ಮಿಸಿದ್ದಾರೆ. ಈ ಕುರಿತು ಮಾತನಾಡಿದ ಮಿಲಿಂದ ಉದಯಕಾಂತ ಅಣ್ವೇಕರ್ ಅವರು ನರೇಂದ್ರ ಮೋದಿಯವರಿಗೆ ಇಷ್ಟ ದೈವವಾದ ಕೇದಾರನಾಥ ದೇವಾಲಯವನ್ನು ನಿರ್ಮಿಸಿ ಮೋದಿಯವರಿಗೆ ಉಡುಗೊರೆಯಾಗಿ ನೀಡಲು ದೇವಾಲಯದ ಪ್ರತಿಮೆಯನ್ನು ನಿರ್ಮಿಸಿದ್ದೇನೆ ಎಂದು ತಿಳಿಸಿದರು.