ಪತ್ನಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಕ್ಕೆ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿದ ಪತಿ…

621
firstsuddi

ಹುಬ್ಬಳ್ಳಿ : ಅವಳಿ ಜವಳಿ ಹೆಣ್ಣು ಮಕ್ಕಳು ಜನಿಸಿದೆ ಎಂದು ಪತಿ ತನ್ನ ಪತ್ನಿಗೆ ಥಳಿಸಿ ಪೆಟ್ರೋಲ್ ಸುರಿದು ಹತ್ಯೆ ಮಾಡಲು ಯತ್ನಿಸಿರುವ ಘಟನೆ ಹಳೇ ಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ. ಬೇಬಿ ಆಯಿಶಾ ಹಲ್ಲೆಗೊಳಗಾದ ಪತ್ನಿ ಎನ್ನಲಾಗಿದ್ದು, ಪತಿ ಸಲ್ಮಾನ್ ಅಹ್ಮದ್ ಕಲಬುರ್ಗಿ ಅವರು ತನ್ನ ಪತ್ನಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ಕಾರಣಕ್ಕೆ ಪ್ರತಿದಿನ ಮಧ್ಯ ಸೇವಿಸಿ ಬಂದು ಪತ್ನಿಗೆ ಥಳಿಸುತ್ತಿದ್ದರು. ಇವರಿಬ್ಬರ ಜಗಳದ ಮದ್ಯೆ ಹಿರಿಯರು ಬಂದು ರಾಜಿ ಮಾಡಿಸಿದ್ದರು ಆದರೂ ಇಂದು ಮತ್ತೆ ಕುಡಿದು ಬಂದು ಪತ್ನಿಗೆ ಥಳಿಸಿ ಪೆಟ್ರೋಲ್ ಸುರಿದು ಹತ್ಯೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಬೇಬಿ ಆಯಿಶಾ ಅವರು ಮನೆಯಿಂದ ಹೊರಗೆ ಓಡಿ ಬಂದು ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ. ಬಳಿಕ ಸ್ಥಳೀಯರು ಬೇಬಿ ಆಯಿಶಾ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಕುರಿತು ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.