ಬಿಜೆಪಿ ಸಂಸದರು ಕೇವಲ ಕಾಗದದ ಹುಲಿಗಳು : ಪ್ರಿಯಾಂಕ್ ಖರ್ಗೆ.

217
firstsuddi

ಬೆಂಗಳೂರು : ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗದ ಕಾರಣ ಮೂಡಿಗೆರೆ ತಾಲ್ಲೂಕಿನ ಎಸ್.ಕೆ. ಮೇಗಲ್ ಗ್ರಾಮದ ಸಂತ್ರಸ್ತ ರೈತ ಚಂದ್ರೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಅವರು ತಮ್ಮ ಟ್ವಿಟರ್‍ನಲ್ಲಿ “ ಪ್ರವಾಹದಿಂದ ತತ್ತರಿಸಿರುವ ಕನಾಟಕದ ರೈತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸುವಲ್ಲಿ ಕನಾಟಕದ ಸಂಸದರು ವಿಫಲರಾಗಿದ್ದಾರೆ. ಈವರೆಗೂ ಕರ್ನಾಟಕದ ನೆರೆಗಾಗಿ ಸರ್ಕಾರದಿಂದ ಶೂನ್ಯ ನಿಧಿಗಳನ್ನು ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸಂಸದರು ಕೇವಲ ಕಾಗದದ ಹುಲಿಗಳು, ರಾಜ್ಯ ಹಿತಾಸಕ್ತಿಗಾಗಿ ಬ್ಯಾಟ್ ಬೀಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಬಳಿ ತೆರಳಿ ಪರಿಹಾರ ಕೇಳಲು ಬಿಜೆಪಿ ಸಂಸದರು ಹೆದರುವುದೇಕೆ? ನೆರೆ ಪರಿಹಾರಕ್ಕಾಗಿ ಇನ್ನೂ ಎಷ್ಟು ಜನ ಸಾಯಬೇಕು?” ಎಂದು ಪ್ರಶ್ನಿಸಿದ್ದಾರೆ.