ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಸಂಸದೆ ಶೋಭ ಕರಂದ್ಲಾಜೆ ಅವರ ವಿರುದ್ಧ ತಮ್ಮ ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಹ ಬಂದು ಸಾವಿರಾರು ಕುಟುಂಬಗಳ ಬದುಕು ಡೋಲಾಯಮಾನವಾಗಿದೆ. ನೆರೆ ಪರಿಹಾರ ಸಿಗುತ್ತಿಲ್ಲ ಎಂದು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾನ್ಯ ಸಂಸದರು ಅವರೊಂದಿಗಿದ್ದು ಧೈರ್ಯ ತುಂಬುವ ಕೆಲಸ ಮಾಡುವ ಬದಲು ಕ್ಷೇತ್ರದಿಂದ ಕಾಲ್ಕಿತ್ತಿರುವುದು ಅವರ ‘ರೈತಪರ ಕಾಳಜಿ’ಯನ್ನು ಎತ್ತಿತೋರಿಸುತ್ತದೆ! ಎಂದರು.











