ತಾನು ಬದುಕಿದ್ದೇನೆ ಎಂದು ಕುಟುಂಬಸ್ಥರಿಗೆ ತಿಳಿಸಲು ಪ್ರತಿದಿನ ಎಟಿಎಂನಿಂದ ಹಣ ಡ್ರಾ ಮಾಡುತ್ತಿರುವ ಯೋಧ…

972
firstsuddi

ಶ್ರೀನಗರ : ತನ್ನ ಕುಟುಂಬದವರಿಗೆ ತಾನು ಬದುಕಿದ್ದೇನೆ ಎಂದು ತಿಳಿಸಲು ಭಾರತೀಯ ಯೋಧರೊಬ್ಬರು ಪ್ರತಿದಿನ ತಮ್ಮ ಎಟಿಎಂನಿಂದ ಹಣ ಡ್ರಾ ಮಾಡುತ್ತಿದ್ದಾರೆ ಎಂಬ ಫೇಸ್‍ಬುಕ್ ಪೋಸ್ಟ್ ವೈರಲ್ ಆಗಿದೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಹಾಗೂ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದಾಗಿ ಕಾಶ್ಮೀರದಲ್ಲಿರುವ ಸೈನಿಕರು ಹಾಗೂ ಸಾಮಾನ್ಯ ಜನರಿಗೆ ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೈನಿಕರೊಬ್ಬರು ಪ್ರತಿದಿನ ಸರತಿ ಸಾಲಿನಲ್ಲಿ ನಿಂತು ಎಟಿಎಂನಿಂದ 100 ರೂ ಹಣವನ್ನು ಡ್ರಾ ಮಾಡುತ್ತಿದ್ದಾರೆ. ಹೀಗೆ ಯೋಧ ಪ್ರತಿದಿನ ಎಟಿಎಂ ಗೆ ಬಂದು 100ರೂ ಹಣವನ್ನು ಡ್ರಾ ಮಾಡುತ್ತಿದ್ದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್ ಯೋಧರ ಬಳಿ ಸರ್ ನಿವು ಪ್ರತಿದಿನ ಏಕೆ 100ರೂ ಡ್ರಾ ಮಾಡುತ್ತೀರ? ನಿಮಗೆ ಒಂದು ವಾರಕ್ಕೆ ಬೇಕಾಗುವಷ್ಟು ಹಣವನ್ನು ಒಂದೇ ಸಲ ಡ್ರಾ ಮಾಡುಬಹುದಲ್ಲವೇ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಯೋಧ ನನ್ನ ಬ್ಯಾಂಕ್ ಖಾತೆ ನನ್ನ ಪತ್ನಿಯ ಹೆಸರಿನಲ್ಲಿ ಲಿಂಕ್ ಆಗಿದೆ. ನನ್ನ ಪತ್ನಿ ಮನೆಯಲ್ಲಿದ್ದಾರೆ. ನಾನು ಇಲ್ಲಿ ಹಣ ಡ್ರಾ ಮಾಡುವುದರಿಂದ ನನ್ನ ಪತ್ನಿಗೆ ಮೆಸೇಜ್ ಹೋಗುತ್ತದೆ. ಆಗ ನನ್ನ ಮನೆಯವರು ನಾನು ಇನ್ನೂ ಬದುಕಿದ್ದೇನೆ ಎಂದು ತಿಳಿಯುತ್ತಾರೆ. ಹೀಗಾಗಿ ಪ್ರತಿದಿನ ಬಂದು ಹಣ ಡ್ರಾ ಮಾಡುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ.