ಮೂಡಿಗೆರೆ : ಕಾಫಿ ತೋಟದಲ್ಲಿ ಕಾಡು ಕುರಿ ಕಳೇಬರ ಪತ್ತೆ…

898
firstsuddi

ಮೂಡಿಗೆರೆ : ಕಾಫಿ ತೋಟದಲ್ಲಿ ಕಾಡು ಕುರಿಯ ಕಳೇಬರ ಪತ್ತೆಯಾಗಿರುವ ಘಟನೆ ಕೊಟ್ಟಿಗೆಹಾರ ಸಮೀಪದ ದ್ಯಾವನಗೂಲ್‍ನಲ್ಲಿ ನಡೆದಿದೆ. ಒಂದು ವರ್ಷ ಪ್ರಾಯದ ಕಾಡುಕುರಿಯ ಕಳೇಬರ ಎನ್ನಲಾಗಿದ್ದು, ಕುತ್ತಿಗೆ ಮತ್ತು ಹೊಟ್ಟೆ ಭಾಗದಲ್ಲಿ ಗಾಯವಾಗಿದ್ದು, ಸೀಳು ನಾಯಿಗಳ ದಾಳಿಗೆ ಮೃತಪಟ್ಟಿರುವ ಸಾಧ್ಯತೆ ಇದ್ದು, ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕಳೇಬರವನ್ನು ಅಂತ್ಯಸಂಸ್ಕಾರ ಮಾಡಲಾಯಿತು.