ಬೆಳ್ಳಂಬೆಳಗ್ಗೆ ಮಾಮಲ್ಲಾಪುರಂ ಬೀಚ್‍ನಲ್ಲಿ ಮೋದಿಯವರಿಂದ ಸ್ವಚ್ಛತೆ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್…

300
firstsuddi

ಮಹಾಬಲಿಪುರಂ : ಚೀನಾ ಅದ್ಯಕ್ಷ ಕ್ಸಿ ಜಿನ್‍ಪಿಂಗ್ ಅವರೊಂದಿಗಿನ ಅನೌಪಚಾರಿಕ ಶೃಂಗಸಭೆ ಹಿನ್ನೆಲೆ, ತಮಿಳುನಾಡಿನ ಮಾಮಲ್ಲಪುರಂನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಬೀಚ್‍ನಲ್ಲಿ ಸ್ವಚ್ಛತಾಕಾರ್ಯವನ್ನು ನಡೆಸಿದ್ದಾರೆ. ಮೋದಿಯವರು ಬೀಚ್‍ನಲ್ಲಿ ಸ್ವಚ್ಛತಾಕಾರ್ಯವನ್ನು ನಡೆಸಿದ ವೀಡಿಯೋವನ್ನು ಸ್ವತಃ ಮೋದಿಯವರೇ ತಮ್ಮ ಟ್ವಿಟರ್ ಹಾಗೂ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ದೇಶದ ಜನತೆಗೆ ಸಂದೇಶವನ್ನು ರವಾನಿಸಿದ್ದಾರೆ. ಟ್ವೀಟ್‍ನಲ್ಲಿ “ಇಂದು ಬೆಳಿಗ್ಗೆ ಮಾಮಲ್ಲಾಪುರಂ ಬೀಚ್‍ನಲ್ಲಿ 30ನಿಮಿಷಕ್ಕೂ ಹೆಚ್ಚು ಕಾಲ ಜಾಗಿಂಗ್ ನಡೆಸಿದೆ. ಈ ವೇಳೆ ಬೀಚ್ ಬಳಿ ಎಸೆದಿದ್ದ ಕಸವನ್ನು ಸಂಗ್ರಹಿಸಿ ನಾವು ತಂಗಿದ್ದ ಹೋಟೆಲ್ ಸಿಬ್ಬಂಧಿ ಜಯರಾಜು ಅವರಿಗೆ ನೀಡಿದ್ದೇನೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛ ಹಾಗೂ ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಹಾಗೆ ಮಾಡುವುದರಿಂದ ನಾವು ಕೂಡಾ ಆರೋಗ್ಯವಂತರಾಗಿರುತ್ತೇವೆ” ಎಂದು ಬರೆದುಕೊಂಡಿದ್ದಾರೆ.