ಡಿಕೆಶಿ ಅವರ ತಾಯಿ ಗೌರಮ್ಮ ಅವರಿಗೂ ಇಡಿ ಸಮ್ಮನ್ಸ್ ಜಾರಿ…

187
firstsuddi

ಬೆಂಗಳೂರು : ಈಗಾಗಲೇ ಅಕ್ರಮ ಹಣಕಾಸು ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮೂರ್ ಅವರು ತಿಹಾರ್ ಜೈಲು ಪಾಲಾಗಿದ್ದು, ಇದೀಗ ಡಿಕೆಶಿ ಅವರ ತಾಯಿ ಗೌರಮ್ಮ ಅವರಿಗೂ ಇಡಿ ಸಮ್ಮನ್ಸ್ ಜಾರಿ ಮಾಡಿದೆ. ಇಡಿ ಅಧಿಕಾರಿಗಳು ಈಗಾಗಲೇ ಡಿಕೆಶಿ ಪುತ್ರಿ ಐಶ್ವರ್ಯಾ, ಸಹೋದರ ಡಿ. ಕೆ. ಸುರೇಶ್ ಅವರನ್ನು ವಿಚಾರಣೆ ನಡಸಿದ್ದು, ಈಗಾ ಡಿಕೆಶಿ ಅವರ ತಾಯಿ ಗೌರಮ್ಮ ಅವರಿಗೂ ಇಡಿ ಸಮ್ಮನ್ಸ್ ಜಾರಿ ಮಾಡಿದೆ. ಗೌರಮ್ಮ ಅವರ ಖಾತೆಯಿಂದ ಕೋಟ್ಯಂತರ ರೂ ಹಣ ವರ್ಗಾವಣೆಯಾಗಿರುವ ಹಿನ್ನೆಲೆ, ಲೋಕನಾಯಕ್ ಭವನದಲ್ಲಿರುವ ಇಡಿ ಕಚೇರಿಗೆ ನಾಳೆ ವಿಚಾರಣೆಗೆ ಆಗಮಿಸುವಂತೆ ಸೂಚಿಸಲಾಗಿದೆ.