ನಾನು ಕೊಲೆ ಮಾಡಿಲ್ಲ, ಅತ್ಯಾಚಾರ ಮಾಡಿಲ್ಲ, ನಾನೇನೆಂದು ಜನರಿಗೆ ಗೊತ್ತಿದೆ : ಡಿ.ಕೆ. ಶಿವಕುಮಾರ್.

287
firstsuddi

ನವದೆಹಲಿ : ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು, ನಾನು ಕೊಲೆ ಮಾಡಿಲ್ಲ, ಅತ್ಯಾಚಾರ ಮಾಡಿಲ್ಲ, ನಾನೇನೆಂದು ಜನರಿಗೆ ಗೊತ್ತಿದೆ. ರಾಜಕಾರಣದ ಬಗ್ಗೆ ಸದ್ಯಕ್ಕೆ ನಾನೇನೂ ಮಾತನಾಡುವುದಿಲ್ಲ. ಸಮಯ ಬಂದಾಗ ನಾನು ಎಲ್ಲದಕ್ಕೂ ಪ್ರತಿಕ್ರಯಿಸುತ್ತೇನೆ. ತಿಹಾನ್ ಜೈಲ್‍ನಲ್ಲಿ ಇದ್ದ ದೀರ್ಘ ಕಥೆ, ಇತಿಹಾಸ ಇದೆ. ಅದನ್ನೆಲೆಲ್ಲಾ ನಿಮ್ಮ ಮುಂದೆ ಸಮಯ ಬಂದಾಗ ಹೇಳುತ್ತೇನೆ. ನಾನು ಹಲವು ನಾಯಕರಿಗೆ ಸಹಾಯ ಮಾಡಿದ್ದೇನೆ. ಅವರು ನನಗೆ ಉಪಕಾರ ಸ್ಮರಣೆ ಮಾಡುವುದು ಸಹಜ. ಆದರೆ ನನ್ನಿಂದ ಯಾವುದೇ ಸಹಕಾರ ಪಡೆಯದ ಸಾವಿರಾರು ಸಾಮಾನ್ಯ ಜನ ನನಗಾಗಿ ಪ್ರಾರ್ಥಿಸಿದ್ದಾರೆ. ಒಂದು ಸಣ್ಣ ಕರೆ ಕೊಟ್ಟಿದಕ್ಕೆ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಅವರ ಋಣ ಹೇಗೆ ತೀರಿಸಬೇಕೆಂದು ನನಗೆ ಗೊತ್ತಾಗುತ್ತಿಲ್ಲ. ಅವರ ಉಪಕಾರದ ಹೊರೆ ನನ್ನ ಮೇಲೆ ಅಪಾರವಾಗಿದೆ. ಆ ಉಪಕಾರದ ಸ್ಮರಣೆ ನಾನು ಮಾಡಬೇಕು. ನನ್ನನ್ನು ಇವನೊಬ್ಬ ಆರೋಪಿ, ಲೂಟಿಕೋರ ಎಂದು ಬಿಂಬಿಸಲಾಗಿತ್ತು. ಆದರೆ ಜನರು ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೇ ನನಗಾಗಿ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆ ನಡೆಸಿದ್ದಾರೆ. ಆ ಜನರಿಗೆ ನಾನು ಆಭಾರಿಯಾಗಿದ್ದೇನೆ ಎಂದರು.