ಹಾಡಹಗಲೇ ಸಿನಿಮೀಯಾ ಶೈಲಿಯಲ್ಲಿ ಪಿಸ್ತೂಲ್, ಚಾಕು ತೋರಿಸಿ ವ್ಯಕ್ತಿಯ ಅಪಹರಣ…

251
firstsuddi

ರಾಯಚೂರು : ಹಾಡಹಗಲೇ ನಾಲ್ವರು ದುಷ್ಕರ್ಮಿಗಳು ಪಿಸ್ತೂಲ್, ಚಾಕು ತೋರಿಸಿ ಸಿನಿಮೀಯಾ ಶೈಲಿಯಲ್ಲಿ ವ್ಯಕ್ತಿಯನ್ನು ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಲಿಂಗಸೂಗುರು ಪಟ್ಟಣದಲ್ಲಿ ನಡೆದಿದೆ. ಮಾರುತಿ ಸಿಯಾಜ್ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಲಿಂಗಸೂಗೂರು ಬಸ್ ನಿಲ್ದಾಣದ ಬಳಿ ನಿಂತಿದ್ದ ವ್ಯಕ್ತಿಯೊಂದಿಗೆ ಸ್ನೇಹದಿಂದ ಮಾತನಾಡಿಸಿ ಅಪಹರಿಸಿದ್ದಾರೆ. ಅಪಹರಿಸುತ್ತಿದ್ದ ವೇಳೆ ಸ್ಥಳೀಯರು ವ್ಯಕ್ತಿಯನ್ನು ರಕ್ಷಿಸಲು ಮುಂದಾದ ವೇಳೆ ದುಷ್ಕರ್ಮಿಗಳು ಪಿಸ್ತೂಲು ಹಾಗೂ ಚಾಕನ್ನು ತೋರಿಸಿ ಬೆದರಿಕೆ ಹಾಕಿ ಅಪಹರಣ ಮಾಡಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಸಿಸಿ ಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.