ಮೂಡಿಗೆರೆ : ಭಕ್ತರ ಚಿತ್ತ ದೇವರಡೆಗೆ ದೇವರ ಚಿತ್ತ ಭಕ್ತರಡೆಗೆ ಕೊಡುವ ವಿಶೇಷ ದಿನವೇ ದೀಪೋತ್ಸವ : ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ.

217
firstsuddi

ಮೂಡಿಗೆರೆ : ಭಕ್ತರ ಚಿತ್ತ ದೇವರಡೆಗೆ ದೇವರ ಚಿತ್ತ ಭಕ್ತರಡೆಗೆ ಕೊಡುವ ವಿಷೇಶ ದಿನವೇ ದೀಪೋತ್ಸವ ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ತಿಳಿಸಿದರು. ಹೊರನಾಡಿನ ಆದಿಶಕ್ತ್ಯಾತ್ಮಕ ಅನ್ನಪೂರ್ಣೆಶ್ವರಿ ದೇವಾಲಯದಲ್ಲಿ ಲಕ್ಷದೀಪೋತ್ಸವ ಮತ್ತು ಪ್ರಾಂಗಣ ಪಲ್ಲಕ್ಕಿ ಉತ್ಸವ, 13 ನೇ ವರ್ಷದ ಉಚಿತ ನೇತ್ರ ತಪಾಸಣಾ ಶಿಬಿರ, 10 ನೇವರ್ಷದ ಉಚಿತ ರಕ್ತಧಾನ ,ಉಚಿತ ದಂತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೀಪಕ್ಕೆ ಹೇಗೆ ಭತ್ತಿ, ಎಣ್ಣೆ ಮತ್ತು ಅವುಗಳನ್ನು ಸಂರಕ್ಷಿಸುವ ಪಾತ್ರೆ ಇರುತ್ತದೋ ಹಾಗೆ ಮಾನವ ಜೀವಿಯು ತನ್ನನ್ನು ಸಂರಕ್ಷಿಸಿಕೊಳ್ಳಲು ಒಂದು ಜ್ಞಾನ ಅತಿಮುಖ್ಯವಾಗಿದೆ ಆ ಜ್ಞಾನವು ಒಂದು ಅದ್ಭುತ ಶಕ್ತಿ. ಆ ಚೈತನ್ಯಯುಕ್ತವಾದ ಶಕ್ತಿಯೇ ದೇವರು ಎಂಬುವುದನ್ನು ಪ್ರತಿಯೊಬ್ಬರು ಅರಿತು ತಮ್ಮ ಲಕ್ಷ್ಯವನ್ನು ದೇವರಡೆಗೆ ತೋರಿದಾಗ ಮಾತ್ರ ಅದರ ಇರುವಿಕೆಯ ಅನುಭವ ಉಂಟಾಗುತ್ತದೆ. ನಾವು ಯಾವಾಗ ದೇವರ ಕಡೆ ಭಕ್ತಿ ಭಾವದಿಂದ ದೇವರನ್ನು ನೆನೆಸಿದರೆ ಆ ದೇವರು ನಮ್ಮನ್ನು ಕಾಪಾಡುತ್ತಾನೆ ಎಂದರು.
ಲಕ್ಷದೀಪೋತ್ಸವದ ಅಂಗವಾಗಿ ಬೆಂಗಳೂರಿನ ಗಿರಿಧರ್ ಕೆ.ಎಸ್ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಚನ್ನರಾಯ ಪಟ್ಟಣದ ವಿದುಷಿ ಅನುಶ್ರೀ ಶ್ರೀನಿವಾಸ್ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮಗಳು ನಡೆದವು. ರಾತ್ರಿ 9.30 ಗಂಟೆಗೆ ಶ್ರೀಮಾತೆಗೆ ಲಕ್ಷದೀಪೋತ್ಸವ, ಪುಷ್ಪಕ ರಥೋತ್ಸವ ಹಾಗೂ ಪ್ರಾಂಗಣ ಚಿಕ್ಕ ರಥೋತ್ಸವ ನಡೆಸಲಾಯಿತು. ಇವುಗಳ ನಡುವೆ 220 ಕ್ಕೂ ಅಧಿಕ ಮಂದಿ ನೇತ್ರ ತಪಾಸಣೆ, 30 ಕ್ಕೂ ಅಧಿಕ ಜನರು ರಕ್ತಧಾನ ಮತ್ತು 180 ಕ್ಕೂ ಅಧಿಕ ಜನರು ದಂತ ಚಿಕಿತ್ಸೆಯನ್ನು ಮಾಡಿಸಿಕೊಂಡರು.
ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ, ರಾಜಲಕ್ಷ್ಮಿ ಬಿ.ಜೋಷಿ, ಗಿರಿಜಾಶಂಕರ್ ಜೋಷಿ ದೀಪಬೆಳಗುವುದರ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೇ ನೀಡಿದರು. ಈ ಸಂದರ್ಭದಲ್ಲಿ ಅಂಕರ ಕಣ ಗಣಪತಿ ದೇವಾಲಯದ ದರ್ಮಕರ್ತ ಜಿ.ಬಿ.ರಾಮಾನಾರಾಯಣ ಜೋಷಿ, ಜಿ.ಬಿ.ರಾಜಗೋಪಾಲ್ ಜೋಷಿ,ಮೂಡಿಗೆರೆ ನ್ಯಾಯಾಲಯದ ಸಿವಿಲ್ ನ್ಯಾಯಾದೀಶೇ ಎಂ.ಎಸ್.ಶಶಿಕಲಾ, ಹೆಚ್ಚುವರಿ ಸಿವಿಲ್ ನ್ಯಾಯಾಧಿಶ ಕೆ.ಎಂ.ಹರೀಶ್, ದೇವಸ್ತಾನದ ವ್ಯವಸ್ಥಾಪಕ ಶೇಷಾಧ್ರಿ ಸೇರಿದಂತೆ ಅನೇಕ ಗಣ್ಯರು ಈ ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.