ಮೂಡಿಗೆರೆ: ದೇಶದಲ್ಲಿ ಲಕ್ಷಾಂತರ ಜನರು ಕಣ್ಣುಗಳಿಲ್ಲದೇ ಬದುಕು ಸಾಗಿಸುತ್ತಿದ್ದಾರೆ. ಅಂತಹವರ ಪಾಲಿಗೆ ನೇತ್ರದಾನದ ಮೂಲಕ ಬೆಳಕು ನೀಡಲು ಸಾಧ್ಯವಿದೆ ಎಂದು ಮೂಡಿಗೆರೆ ಲಯನ್ಸ್ ಕ್ಲಬ್ನ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ಗೌಡ ಅಭಿಪ್ರಾಯ ಪಟ್ಟರು.
ಬಣಕಲ್ ಸುಬಾಷನಗರದ ಸಮುದಾಯ ಭವನದಲ್ಲಿ ಸೋಮವಾರದಂದು ಮೂಡಿಗೆರೆ ಲಯನ್ಸ್ಕ್ಲಬ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಬಣಕಲ್ನಲ್ಲಿ ಮತ್ತೊಮ್ಮೆ ಇದೇ ನ.25 ರಂದು ನೇತ್ರ ತಪಾಸಣಾ ಶಿಬಿರ ಮಾಡಲು ನಿರ್ಧರಿಸಿದ್ದೇವೆ. ಅಲ್ಲಿ ತಪಾಸಣೆಗೊಂಡ ಅರ್ಹ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆಯನ್ನು ಡಿಸೆಂಬರ್ 20 ರಂದು ಗವರ್ನರ್ ಉಪಸ್ಥಿತವಿರುವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ವಿಠಲ್ ಪೂಜಾರಿ ಮಾತನಾಡಿ,ಸಂಘ ಸಂಸ್ಥೆಗಳು ಸಾಮಾಜಿಕ ಕಾರ್ಯ ಮಾಡುವ ಮೂಲಕ ತೊಡಗಿಸಿಕೊಳ್ಳಬೇಕು. ಪರೋಪಕಾರಗೌಣವಾಗದೇ ನಿರಂತರ ಪರರ ಸೇವೆಗೆ ನಾವು ಸಿದ್ದರಿರಬೇಕು ಎಂದರು.
ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ನೇತ್ರಾಧಿಕಾರಿ ಬಿ.ಎಲ್.ರಂಗನಾಥ್ಗೌಡ ಮಾತನಾಡಿ, ಸಂಘ ಸಂಸ್ಥೆಗಳು ಉಚಿತವಾಗಿ ನೀಡುವ ಸೌಲಭ್ಯಗಳನ್ನು ಜನರು ಬಳಸಿಕೊಂಡು ನೇತ್ರ ಸಂರಕ್ಷಣೆ ಮಾಡಬೇಕು. ನಮ್ಮ ಕಣ್ಣು ನಮಗೆ ಮಾತ್ರ ಬೆಳಕು ನೀಡುವುದಲ್ಲದೇ ಮರಣಾನಂತರ ಮಣ್ಣಾಗಬೇಕಾದ ಕಣ್ಣುಗಳನ್ನು ಪರರಿಗೆ ನೀಡುವ ಮೂಲಕ ಅವರ ಜೀವನದಲ್ಲೂ ಬೆಳಕು ನೀಡಲು ಕಾರಣರಾಗಬೇಕು ಎಂದರು.150 ಕ್ಕೂ ಅಧಿಕ ಜನರ ನೇತ್ರಗಳನ್ನು ವೈದ್ಯರು ತಪಾಸಣೆ ಮಾಡಿ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನೇತ್ರ ಪರೀಕ್ಷಕಿ ಪ್ರಕೃತಿ ಆರ್.ಗೌಡ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರಕಾಶ್, ಖಜಾಂಚಿ ದಶರತ್ಗೌಡ, ಮಾಜಿಅಧ್ಯಕ್ಷ ಜಗಮೋಹನ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ಶ್ರೀನಿವಾಸ್, ಒಕ್ಕೂಟದ ಅಧ್ಯಕ್ಷೆ ಅತೀಕಾ ಭಾನು, ಸೇವಾ ಪ್ರತಿನಿಧಿ ರೇವತಿಹಾಗೂ ಒಕ್ಕೂಟದ ಸದಸ್ಯರುಇದ್ದರು.
Home ಸ್ಥಳಿಯ ಸುದ್ದಿ ಮೂಡಿಗೆರೆ : ಕಣ್ಣಿಲ್ಲದೆ ಬದುಕು ಸಾಗಿಸುತ್ತಿರುವಂತವರಿಗೆ ನೇತ್ರದಾನದಿಂದ ಬೆಳಕು ನೀಡಲು ಸಾಧ್ಯ : ಲಯನ್ಸ್ ಕ್ಲಬ್ನ...










