ಚಿಕ್ಕಮಗಳೂರು : ಬ್ಯಾನರ್‍ನಲ್ಲಿ ಮುಸ್ಲಿಂ ಮುಖಂಡರ ಭಾವಚಿತ್ರವನ್ನು ಹಾಕದ್ದಕ್ಕೆ ಕೈ-ಕೈ ಮಿಲಾಯಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು…

985
firstsuddi

ಚಿಕ್ಕಮಗಳೂರು : ಇಂದು ಜಿಲ್ಲೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಭೇಟಿ ಬೆನ್ನಲ್ಲೇ, ಜಿಲ್ಲಾ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು, ಬ್ಯಾನರ್‍ನಲ್ಲಿ ಭಾವಚಿತ್ರ ಹಾಕುವ ವಿಚಾರಕ್ಕೆ ನಗರದ ಹನುಮಂತಪ್ಪ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು ಒಬ್ಬರನ್ನೊಬ್ಬರು ತಳ್ಳಾಡಿಕೊಂಡು ರಂಪಾಟ ನಡೆಸಿದ್ದಾರೆ. ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಭೇಟಿ ಹಿನ್ನೆಲೆ, ನಗರದಲ್ಲಿ ಹಾಕಲಾಗಿದ್ದ ಬ್ಯಾನರ್‍ನಲ್ಲಿ ಮುಸ್ಲಿಂ ಮುಖಂಡರ ಭಾವಚಿತ್ರವನ್ನು ಹಾಕದಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಹಿಲ್ ಅಕ್ಮಲ್ ಅವರು ಮುಸ್ಲಿಮರ ಮತ ಬೇಕು ಮುಸ್ಲಿಂ ಮುಖಂಡರ ಭಾವಚಿತ್ರ ಏಕೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ನಡುರಸ್ತೆಯಲ್ಲೇ ಕೊರಳ ಪಟ್ಟಿ ಹಿಡಿದು ಕೈ-ಕೈ ಮಿಲಾಯಿಸಿದ್ದಾರೆ.