ಮೂಡಿಗೆರೆ : ಪಟದೂರು ನಿಸರ್ಗ ಅವರಿಗೆ ಚಿನ್ನದ ಪದಕ…

670
firstsuddi

ಮೂಡಿಗೆರೆ : ತಾಲ್ಲೂಕಿನ ಪಟದೂರು ಗ್ರಾಮದ ಪಿ.ಎನ್. ನಿಸರ್ಗ ಅವರು ಮಂಗಳೂರಿನ ಸೆಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಟೆಲಿಕಮ್ಯೂನಿಕೇಷನ್ ವಿಭಾಗದಲ್ಲಿ 2018-19ನೇ ಸಾಲಿನ ಪದವಿಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದು, ವಾಮಂಜೂರು ಸೆಂಟ್ ಜೋಸೆಫ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಷಫ್ ರೆ. ಡಾ. ಪೀಟರ್ ಪೌಲ್ ಸಾಲ್ಡಾನಾ ಅವರು ಚಿನ್ನದ ಪದಕ ಪ್ರಧಾನ ಮಾಡಿದರು. ಇವರು ರೈತ ಸಂಘ ಮುಖಂಡರಾದ ಪಟದೂರು ನಾಗೇಶ್ ಹಾಗೂ ಬಿ.ಎಂ. ಉಷಾ ನಾಗೇಶ್ ದಂಪತಿಯ ಪುತ್ರಿ.