ಟಾಲಿವುಡ್ ನಟ ವಿಜಯ್ ದೇವರಕೊಂಡ ಖರೀದಿಸಿರುವ ಮನೆಯ ಬೆಲೆ ಎಷ್ಟು ಗೊತ್ತಾ?

828
firstsuddi

ಹೈದರಾಬಾದ್ : ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರು ಇತ್ತೀಚೆಗೆ ಹೈದರಾಬಾದ್‍ನ ಜುಬ್ಲಿ ಹಿಲ್ಸ್‍ನಲ್ಲಿ 15 ಕೋಟಿ ರೂ ಮೌಲ್ಯದ ಹೊಸ ಮನೆಯನ್ನು ಖರೀದಿಸಿದ್ದು, ಗೃಹ ಪ್ರವೇಶದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅವರ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಸಂಬಂಧಿಕರು ಹಾಗೂ ಸ್ನೇಹಿತರು ಭಾಗವಹಿಸಿದ್ದರು. ವಿಜಯ್ ದೇವರಕೊಂಡ ಅವರು ತಮ್ಮ ಕುಟುಂಬಸ್ಥರೊಂದಿಗೆ ಹೊಸ ಮನೆಯಲ್ಲಿ ಕುಳಿತುಕೊಂಡು ಕ್ಲಿಕ್ಕಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದಕ್ಕೆ “ಅಮ್ಮನ ಖುಷಿ, ಅಪ್ಪನ ಹೆಮ್ಮೆ, ನಮ್ಮ ಹೊಸ ಮನೆ. ನಾಲ್ವರು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ. ನೀವೆಲ್ಲರೂ ನನ್ನ ಜೀವನದ ಒಂದು ಭಾಗ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.