ಕೈಲಾಸಕ್ಕೆ ವೀಸಾ ಪಡೆಯುವ ಕಾರ್ಯವಿಧಾನಗಳು ಏನು?-ಆರ್.ಅಶ್ವಿನ್ ವ್ಯಂಗ್ಯ…

199
firstsuddi

ಹೈದರಾಬಾದ್ : ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅವರು ಹೊಸ ದೇಶ ಸ್ಥಾಪನೆ ಮಾಡಿರುವ ಬಗ್ಗೆ ಭಾರತ ತಂಡದ ಕ್ರಿಕೆಟ್ ಆಟಗಾರ ಆರ್. ಅಶ್ವಿನ್ ಅವರು ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ. ನಿತ್ಯಾನಂದ ಸ್ವಾಮಿ ಈಕ್ವೇಡಾರ್‍ನಲ್ಲಿ ಸ್ವಂತ ದೇಶವನ್ನೇ ಖರೀದಿಸಿ ಅದಕ್ಕೆ ಪ್ರತ್ಯೇಕ ಧ್ವಜ, ಲಾಂಛನ, ಪಾಸ್‍ಪೋರ್ಟ್ ಸಿದ್ದಪಡಿಸಿದ್ದು, ಇದನ್ನು ಪ್ರಶ್ನಿಸಿ ಅಶ್ವಿನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕೈಲಾಸಕ್ಕೆ ವೀಸಾ ಪಡೆಯುವ ಕಾರ್ಯವಿಧಾನಗಳು ಏನು? ಅಥವಾ ಅದು ಆಗಮಿಸುತ್ತಿದೆಯೇ? ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.