ಹಾಸನ : ಶಾಸಕ ಶಿವಲಿಂಗೇಗೌಡರ ಬಗ್ಗೆ ರೈತ ಹಾಡಿರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್…

461

ಹಾಸನ : ಶಾಸಕ ಶಿವಲಿಂಗೇಗೌಡರು ಅಭಿವೃದ್ದಿಯ ಕನಸು ಹೊತ್ತು ಬಂದರು ಎಂದು ಆಡಿಸಿ ನೋಡು ಬೀಳಿಸಿ ನೋಡು ಹಾಡಿಗೆ ಡಬ್ ಮಾಡಿ ಹಾಡಿರುವ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕ ಶಿವಲಿಂಗೇಗೌಡರ ಬಗ್ಗೆ ಹಾಡಿರುವ ರೈತ ನಮ್ಮದು ಬರಡು ತಾಲ್ಲೂಕು ಅರಸೀಕೆರೆಗೆ ಹೇಮಾವತಿ ನೀರು ತಂದರು. ಹಳ್ಳಿ ಹಳ್ಳಿಗು ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದರು ಎಂದು ಗುಣಗಾನ ಮಾಡಿದ್ದು, ಸೆಲ್ಫಿ ವೀಡಿಯೋ ಮೂಲಕ ಹಾಡಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಅಭಿಮಾನಿ. ಸತತ ಮೂರು ಬಾರಿ ಶಾಸಕರಾಗಿ ಅರಸೀಕೆರೆ ಕ್ಷೇತ್ರದಿಂದ ಆಯ್ಕೆ ಆಗಿರುವ ಶಿವಲಿಂಗೇಗೌಡರು ಕ್ಷೇತ್ರದಲ್ಲಿ ಉತ್ತಮ ಅಭಿವೃದ್ದಿ ಕೆಲಸ ಮಾಡುತ್ತಿದ್ದಾರೆಂದು ಹಾಡಿನ ಮೂಲಕ ರೈತ ಹೊಗಳಿದ್ದಾರೆ.