ಮೂಡಿಗೆರೆ : ಮಹಿಳೆಯರು ಸ್ವಂತ ಉದ್ಯೋಗ ಮಾಡುವ ಮೂಲಕ ಭವಿಷ್ಯದ ದಾರಿ ಕಂಡುಕೊಳ್ಳಬೇಕು : ಗ್ರಾ.ಪಂ ಅಧ್ಯಕ್ಷೆ ರವಿಕಲಾ ಪೈ.

370
firstsuddi

ಬಣಕಲ್: ಸರ್ಕಾರವು ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡುವ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಆದ್ಯತೆ ನೀಡುತ್ತಿದೆ ಎಂದು ಕೊಟ್ಟಿಗೆಹಾರದ ತರುವೆ ಗ್ರಾ.ಪಂ ಅಧ್ಯಕ್ಷೆ ರವಿಕಲಾ ಪೈ ಹೇಳಿದರು.
ಕೊಟ್ಟಿಗೆಹಾರದ ತರುವೆ ಗ್ರಾ.ಪಂ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಉಚಿತ ಹೊಲಿಗೆ ಮತ್ತಿತರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಈ ನಿಟ್ಟಿನಲ್ಲಿ ಸರ್ಕಾರ ಪರಿಶಿಷ್ಟ ಪಂಗಡ ಹಾಗೂ ಜಾತಿಯ ಮಹಿಳೆಯರಿಗೆ ಒಂದು ತಿಂಗಳ ತರಬೇತಿ ನೀಡುತ್ತಿದೆ. ಇದನ್ನು ಸದುಪಯೋಗ ಮಾಡಿಕೊಂಡು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ತರುವೆ ಗ್ರಾ.ಪಂ ಪಿಡಿಓ ಕೆ.ವಿ ಶಾರದಾ ಮಾತನಾಡಿ ಸರ್ಕಾರದಿಂದ ಇದೊಂದು ಉತ್ತಮ ಯೋಜನೆಯಾಗಿದ್ದು ಹೊಲಿಗೆ ತರಬೇತಿ, ಎಂಬ್ರಾಯಡರಿ ಹಾಗೂ ಸೀರೆಗೆ ಕುಚ್ಚು ಹಾಕುವ ತರಬೇತಿಯನ್ನು ಉಚಿತವಾಗಿ ಕಲಿತು ಸ್ವಂತ ಉದ್ಯೋಗ ಮಾಡಬಹುದಾಗಿದೆ. ಈಗಾಗಲೇ ತರುವೆ ಗ್ರಾ.ಪಂ ವ್ಯಾಪ್ತಿಯ 18 ಜನ ಮಹಿಳೆಯರು ಈ ತರಬೇತಿಯಲ್ಲಿ ಹೆಸರು ನೊಂದಾಯಿಸಿದ್ದಾರೆ. ಒಂದು ತಿಂಗಳು ಈ ತರಬೇತಿ ಮುಂದುವರೆಯಲಿದ್ದು ಸ್ವ ಉದ್ಯೋಗ ಕೈಗೊಳ್ಳಬೇಕು ಎನ್ನುವ ಅಭಿಲಾಷೆ ಇರುವ ಮಹಿಳೆಯರಿಗೆ ಇದೊಂದು ಉತ್ತಮ ಯೋಜನೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಲಲಿತಸುರೇಶ್, ಮಾಜಿ ಗ್ರಾ.ಪಂ ಅಧ್ಯಕ್ಷಯೆ ಕಲ್ಯಾಣಿ, ಸಿಬ್ಬಂದಿಗಳಾದ ಕಾವ್ಯ, ರಮೇಶ್,ಹೊಲಿಗೆ ತರಬೇತಿದಾರರಾದ ಸುಧಾಪ್ರಭಾಕರ್ ಹಾಗೂ ಗ್ರಾಮದ ಮಹಿಳೆಯರು ಇದ್ದರು.