ಜಾರ್ಖಂಡ್ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರತಿ ಕುಟುಂಬ ಒಂದೊಂದು ಇಟ್ಟಿಗೆಯನ್ನು ನೀಡಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. ಜಾರ್ಖಂಡ್‍ನ ಗಿರಿದಿಹ್‍ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿಸ ಅವರು, ಶೀಘ್ರದಲ್ಲೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿಯೊಂದು ಕುಟುಂಬ 11ರೂ. ಹಾಗೂ ಒಂದೊಂದು ಇಟ್ಟಿಗೆಯನ್ನು ನೀಡಬೇಕು. ರಾಮ ರಾಜ್ಯ ಸಮಾಜದ ಕೊಡುಗೆಯಿಂದ ಮುನ್ನಡೆಯುತ್ತದೆ ಎಂದರು.










