ಹಾಸನ : ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಫಾಸ್ಟ್ಯಾಗ್ ಹೆಸರಿನ ನೂತನ ಇ-ಟೋಲ್ ಸಂಗ್ರಹ ವ್ಯವಸ್ಥೆ ಕಡ್ಡಾಯ ಮಾಡಿದ್ದು, ಆದರೆ ಇಂದು ವೀಕೆಂಡ್ ಇರುವುದರಿಂದ ತಾಲ್ಲೂಕಿನ ಶಾಂತಿಗ್ರಾಮ ಟೋಲ್ ಬಳಿಯಲ್ಲಿ ಟ್ರಾಫಿಕ್ ಸಮಸ್ಯೆಯಿಂದ ವಾಹನ ಸವಾರರು ಪರದಾಡುವಂತಾಗಿದ್ದು, ಫಾಸ್ಟ್ಯಾಗ್ ಇಲ್ಲದೆ ಇರುವ ವಾಹನಗಳಿಗೆ ಟೋಲ್‍ನಲ್ಲಿ ಒಂದೇ ಮಾರ್ಗ ಇದ್ದುದರಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಟೋಲ್‍ಗೇಟ್ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.









