ಬೆಂಗಳೂರು : ಮಹಿಳಾ ಕಂಡಕ್ಟರ್ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಸತ್ಯ ಬಹಿರಂಗವಾಗಿದ್ದು, ಮಹಿಳಾ ಕಂಡಕ್ಟರ್ ಇಂದಿರಾ ಬಾಯಿ ಅವರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದು ಆಕೆಯ ಮೈದುನ ಅರುಣ್ ನಾಯಕ್ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಅರುಣ್ ನಾಯಕ್ ಪೀಣ್ಯ ಡಿಪೋದಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಅರುಣ್ ನಾಯಕ್ ಹಾಗೂ ಇಂದಿರಾಬಾಯಿ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಶಾಂತಿನಗರ ಡಿಪೋದಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಂದಿರಾಬಾಯಿ ಅವರು ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದೇ ವಿಷಯಕ್ಕೆ ಕೋಪಗೊಂಡ ಅರುಣ್ ನಾಯಕ್ ಮಹಿಳೆಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಸದ್ಯ ಪೊಲೀಸರು ಅರುಣ್ ನಾಯಕ್ ಹಾಗೂ ಸ್ನೇಹಿತ ಕುಮಾರ್ ನಾಯಕ್ನನ್ನು ಬಂದಿಸಿದ್ದಾರೆ.










