ಚಿಕ್ಕಮಗಳೂರು : ಮಂಗಳೂರಿನ ಪ್ರತಿಷ್ಠಿತ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಎಂಡೋಕ್ರೈನಾಲಜಿ (ಹಾರ್ಮೋನ್ ಸಂಬಂಧಿತ ರೋಗಗಳ) ಉಚಿತ ತಪಾಸಣಾ ಶಿಬಿರ ಜ.9 ರಿಂದ 11 ರ ವರೆಗೆ ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯಲಿರುವ ಶಿಬಿರದಲ್ಲಿ ಆಸ್ಪತ್ರೆಯ ತಜ್ಞವೈದ್ಯರ ತಂಡ ಪಾಲ್ಗೊಂಡು ಉಚಿತ ತಪಾಸಣೆ ಮತ್ತು ಸಲಹೆ ನೀಡಲಿದೆ.
ಮಧುಮೇಹ, ಗಂಟಲು, ಥೈರಾಯ್ಡ್ ಊತ, ಸ್ವರದಲ್ಲಿ ಬದಲಾವಣೆ, ದೇಹತೂಕದ ಹೆಚ್ಚಳ-ಇಳಿಕೆ, ಬೊಜ್ಜುದೇಹ, ಮುಟ್ಟಿನ ತೊಂದರೆ, ಬಂಜೆತನ, ಮುಂಚಿತ ಅಥವಾ ವಿಳಂಬಿತ ಪ್ರೌಢಾವಸ್ಥೆ, ಮಹಿಳೆಯರ ಮುಖ ಹಾಗು ಮೈಯಲ್ಲಿ ಕೂದಲಿನ ಬೆಳವಣಿಗೆ, ಮೂಳೆಗಳ ದುರ್ಬಲತೆ, ನಡುಕ, ಅತಿಯಾದ ಬೆವರು, ಮಕ್ಕಳಲ್ಲಿನ ಡೌನ್ ಸಿಂಡ್ರೋಮ್, ಮೂಳೆಗಳ ವಿರೂಪ, ರಕ್ತದಲ್ಲಿ ಸಕ್ಕರೆ ಅಂಶ ಕಮ್ಮಿ ಇರುವುದು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿರುವವರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ತಪಾಸಣೆಗೊಳಗಾದವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯ ಕಂಡು ಬಂದಲ್ಲಿ ರಿಯಾಯತಿ ದರದಲ್ಲಿ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ|| ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ.
ಹೆಸರು ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 0824 6613252 ಅಥವಾ 8494890600 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
Home ಸ್ಥಳಿಯ ಸುದ್ದಿ ಮಂಗಳೂರಿನ ಪ್ರತಿಷ್ಠಿತ ಎ.ಜೆ.ಆಸ್ಪತ್ರೆಯಲ್ಲಿ ಜ.9 ರಿಂದ 11 ರವರೆಗೆ ಹಾರ್ಮೋನ್ ಸಂಬಂಧಿತ ರೋಗಗಳ ಉಚಿತ ತಪಾಸಣಾ...










