ನವದೆಹಲಿ : ಇಡೀ ದೇಶವನ್ನೇ ನಿಬ್ಬೆರಗಾಗಿಸಿದ್ದ 2012ರ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಆರೋಪಿಗಳಾದ ಮುಖೇಶ್, ಪವನ್, ಅಕ್ಷಯ್ ಹಾಗೂ ವಿನಯ್ ಗೆ ಶೀಘ್ರವಾಗಿ ಗಲ್ಲುಶಿಕ್ಷೆಯನ್ನು ವಿಧಿಸಬೇಕೆಂದು ಕೋರಿ ನಿರ್ಭಯಾ ಪೋಷಕರು ದೆಹಲಿಯ ಪಟಿಯಾಲ ಹೌಸ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್ ಅರ್ಜಿಯನ್ನು ಪುರಸ್ಕರಿಸಿದ್ದು, ಜ.22ರಂದು ಬೆಳಿಗ್ಗೆ 7ಗಂಟೆಗೆ ಆರೋಪಿಗಳನ್ನು ಗಲ್ಲಿಗೇರಿಸಲು ಡೆತ್ ವಾರೆಂಟ್ ಹೊರಡಿಸಿದೆ. ಅಲ್ಲದೇ ನ್ಯಾಯಧೀಶರ ಎದುರಲ್ಲೇ ಗಲ್ಲಿಗೇರಿಸಬೇಕು ಎಂದು ಆದೇಶಿಸಿದ್ದು, 7ವರ್ಷಗಳ ಬಳಿಕ ನಿರ್ಭಯಾ ಪೋಷಕರಿಗೆ ನ್ಯಾಯ ಸಿಕ್ಕಂತಾಗಿದೆ.










