ಗೋಣಿಬೀಡು : ಶ್ರೀ ಹನುಮಂತ ಮತ್ತು ಶ್ರೀ ಕೇಶವ ಸ್ವಾಮಿದೇವಾಲಯದಲ್ಲಿ ವೈಕುಂಠ ಏಕಾದಶಿ ಆಚರಣೆ…

191
firstsuddi

ಮೂಡಿಗೆರೆ : ತಾಲ್ಲೂಕಿನ ಗೋಣಿಬೀಡಿನಲ್ಲಿರುವ ಶ್ರೀ ಹನುಮಂತ ಮತ್ತು ಶ್ರೀ ಕೇಶವ ಸ್ವಾಮಿದೇವಾಲಯದಲ್ಲಿ ವೈಕುಂಠ ಏಕಾದಶಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಜನಾರ್ಧನ ಭಟ್ ಅವರ ನೇತ್ರತ್ವದಲ್ಲಿ ಪಂಚಾರಾತ್ರಾಗವ ಪದ್ಧತಿಯಲ್ಲಿ ಶ್ರೀ ಹನುಮಂತ, ಶ್ರೀ ಕೇಶವ ಸ್ವಾಮಿ ಹಾಗೂ ಪರಿವಾರ ದೇವರುಗಳಿಗೆ ಅಭಿಷೇಕ ಮತ್ತು ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ದೇವತಾ ಮೂರ್ತಿ ಹಾಗೂ ದೇವಾಲಯದ ಗರ್ಭಗುಡಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಯಿತು. ಸಹಸ್ರನಮಾರ್ಚನೆ, ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ವಿಶೇಷವಾಗಿ ತಯಾರಿಸಿದ ಪೊಂಗಲ್ ಪ್ರಸಾದ ವಿನಿಯೋಗ ಮಾಡಲಾಯಿತು. ಪೂಜೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತರುಗಳು ಆಗಮಿಸಿ ಪುನೀತರಾದರು.