ಈ ಟಿಪ್ಸ್ ಫಾಲೋ ಮಾಡಿ…ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ.

277
firstsuddi

ಇನ್ನೇನು ಕೆಲ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಲಿದೆ. ಕೆಲ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ತಯಾರಿ ನಡೆಸಲು ಶುರು ಮಾಡಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳು ನಾಳೆ ಓದೋಣ, ನಾಡಿದ್ದು ಓದಕ್ಕೆ ಶುರು ಮಾಡೋಣ ಅಂತ ಮುಂದಕ್ಕೆ ಹಾರುತ್ತಿರುತ್ತಾರೆ. ಒಟ್ಟಾರೆ ಪರೀಕ್ಷೆ ಮುಗಿದು ಫಲಿತಾಂಶ ಬರುವವರೆಗೂ ಪೋಷಕರಲ್ಲಿ ಆತಂಕ ಮನೆ ಮಾಡಿರುತ್ತದೆ. ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಅಂತ ವಿದ್ಯಾರ್ಥಿಗಳು ಕೇವಲ ಎಂಜಾಯ್ ಮಾಡಲು ಈ ಲೈಫ್‍ನ ಬಳಸಿಕೊಳ್ಳದೆ ಒಂದೊಳ್ಳೆ ಅಂಕಗಳೊಂದಿಗೆ ತೇರ್ಗಡೆಯಾದರೆ ಮುಂದಿನ ಭವಿಷ್ಯ ಉಜ್ವಲವಾಗಿರಲು ಸಹಕಾರಿಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಕೆಲ ವಿದ್ಯಾರ್ಥಿಗಳಿಗೆ ಓದಲು ಕುಳಿತರೆ ಸಾಕು ನಿದ್ದೆ ಬರುವುದಕ್ಕೆ ಶುರುವಾಗುತ್ತದೆ. ಅದೇ ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಚಾಟ್ ಮಾಡುವಾಗ, ಟಿವಿ ನೋಡುವಾಗ, ಕಂಪ್ಯೂಟರ್ ಅಥವಾ ಮೊಬೈಲ್‍ನಲ್ಲಿ ಗೇಮ್ಸ್ ಆಡುವಾಗ, ಯುಟೂಬ್, ಟ್ವಿಟರ್, ಇನ್‍ಸ್ಟಾಗ್ರಾಮ್‍ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮಗ್ನನಾಗಿರುವಾಗ ಕಣ್ಣನ್ನು ಸಹ ಮಿಟುಕಿಸುವುದಿಲ್ಲ. ಒಟ್ಟಾರೆ ಇವುಗಳ ಬಳಕೆಯಲ್ಲಿರುವ ಆಸಕ್ತಿ ಓದಲು ಇರುವುದಿಲ್ಲ. ಈ ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಇನ್ನು ಮುಂಬರುವ ಪರೀಕ್ಷೆಗೆ ತಯಾರಾಗಲು ಸಮಯ ಮೀರಿಲ್ಲ. ಇರುವ ಸಮಯವನ್ನು ಸಧ್ಬಳಕೆ ಮಾಡಿಕೊಂಡು ಯಾವ ರೀತಿ ಓದಬೇಕೆಂದು ಕೆಲ ಟಿಪ್ಸ್ ಗಳನ್ನು ಈ ಕೆಳಗೆ ನೀಡಲಾಗಿದೆ. ಈ ಟಿಪ್ಸ್ ಗಳನ್ನು ಫಾಲೋ ಮಾಡಿದ್ದೇ ಆದಲ್ಲಿ ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗುವಿರಿ.

 

• ಮೊಬೈಲ್ ಮತ್ತು ಟಿವಿಯಿಂದ ದೂರವಿರಿ.
• ವೇಳಾಪಟ್ಟಿ ಹಾಕಿಕೊಂಡು ಓದಬೇಕು.
• ಓದಲು ಪ್ರಶಾಂತವಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.
• ಹಿತ ಮಿತವಾದ ಆಹಾರ ಸೇವಿಸಿ.
• ಮನಸ್ಸಿನಲ್ಲಿ ಓದುವ ಬದಲು ಜೋರಾಗಿ ಬಾಯಿಂದ ಓದಿ.
• ಬೆಳಿಗ್ಗೆ ಮತ್ತು ಸಂಜೆ ಓದಲು ಕೂರುವ ಮುನ್ನ 10 ನಿಮಿಷ ಧ್ಯಾನ ಮಾಡಿ.
• ನಿದ್ರೆ ಮಾಡುವುದಕ್ಕೆ ಸಮಯವನ್ನು ನಿಗದಿ ಮಾಡಿಕೊಳ್ಳಿ.
• ಭಯದಿಂದ ಓದಬೇಡಿ ಬದಲಾಗಿ ಇಷ್ಟಪಟ್ಟು ಓದಿ.
• ಆರೋಗ್ಯದ ಮೇಲೆ ಪರಿಣಾಮ ಬೀರುವ ಆಹಾರದಿಂದ ದೂರವಿರಿ.
• ಓದುವುದನ್ನು ಕಂಠಪಾಠ ಮಾಡುವ ಬದಲು ಅರ್ಥೈಸಿ ಓದಿ.
• ಕಷ್ಟವಾದ ವಿಷಯವನ್ನು ಹೆಚ್ಚು ಅಧ್ಯಯನ ಮಾಡಿ.
• ಅರ್ಥವಾಗದಿದ್ದನ್ನು ಶಿಕ್ಷಕರೊಂದಿಗೆ, ಸ್ನೇಹಿತರೊಂದಿಗೆ ಚರ್ಚಿಸಿ.